alex Certify BIG NEWS: ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸ್ಥಾನ ಪಡೆದುಕೊಂಡ ಭಾರತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸ್ಥಾನ ಪಡೆದುಕೊಂಡ ಭಾರತ

ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ ಅರೆಕಾಲಿಕ ಸದಸ್ಯ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದುಕೊಂಡಿದೆ. ಚಲಾವಣೆಯಾದ 192 ಮತಗಳ ಪೈಕಿ ಭಾರತಕ್ಕೆ 184 ಮತಗಳು ಲಭಿಸಿವೆ. ಇದರಿಂದಾಗಿ 5 ಕಾಯಂ ಹಾಗೂ 10 ಅರೆಕಾಲಿಕ ಸೇರಿದಂತೆ ವಿಶ್ವ ಸಂಸ್ಥೆಯ ಒಟ್ಟು 15 ಭದ್ರತಾ ಮಂಡಳಿ ಸದಸ್ಯ ರಾಷ್ಟ್ರಗಳ ಪೈಕಿ ಈಗ ಭಾರತವೂ ಕೂಡಾ ಒಂದಾಗಿದೆ.

2020-21 ನೇ ಸಾಲಿನಲ್ಲಿ ಭಾರತ, ವಿಶ್ವ ಸಂಸ್ಥೆ ಭದ್ರತಾ ಮಂಡಳಿ ಸದಸ್ಯ ಸ್ಥಾನದೊಂದಿಗೆ ಕಾರ್ಯ ನಿರ್ವಹಿಸಲಿದ್ದು, ಈ ಹಿಂದೆ ಭಾರತ 1950-51, 1967-68, 1972-73, 1977-78, 1984-85, 1991-92 ಹಾಗೂ 2011-12 ರಲ್ಲಿ ಸ್ಥಾನ ಪಡೆದುಕೊಂಡಿತ್ತು. ಪ್ರಸ್ತುತ ಭಾರತ – ಚೀನಾ ಗಡಿಯಲ್ಲಿ ಪ್ರಕ್ಷುಬ್ದ ಪರಿಸ್ಥಿತಿ ತಲೆದೋರಿರುವ ಮಧ್ಯೆ ಭಾರತಕ್ಕೆ ಈ ಸ್ಥಾನ ದೊರೆಕಿರುವುದು ಮಹತ್ವ ಪಡೆದುಕೊಂಡಿದೆ.

ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ ಅಮೆರಿಕಾ, ಯುನೈಟೆಡ್‌ ಕಿಂಗ್ಡಂ, ರಷ್ಯಾ, ಫ್ರಾನ್ಸ್‌ ಹಾಗೂ ಚೀನಾ ಕಾಯಂ ಸ್ಥಾನ ಹೊಂದಿದ್ದು, ಭಾರತ ಈ ರಾಷ್ಟ್ರಗಳ ಪಟ್ಟಿ ಸೇರ್ಪಡೆಗೊಳ್ಳಲು ಇಂದಿನ ಗೆಲುವು ಮತ್ತೊಂದು ಪ್ರಮುಖ ಹೆಜ್ಜೆಯಾಗಲಿದೆ. 193 ಸದಸ್ಯರನ್ನೋಳಗೊಂಡ ಮಂಡಳಿ ಪ್ರತಿ ವರ್ಷ ಎರಡು ವರ್ಷಗಳ ಅವಧಿಗಾಗಿ ಐದು ಅರೆಕಾಲಿಕ ಸದಸ್ಯ ರಾಷ್ಟ್ರಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...