ಇಟಲಿಯ ಭಾರತೀಯ ರಾಯಭಾರಿ ಕಚೇರಿ ಎದುರು ಖಲಿಸ್ತಾನ ಬೆಂಬಲಿಗರು ನಡೆಸಿದ ಪ್ರತಿಭಟನೆಯನ್ನ ಖಂಡಿಸಿರುವ ಭಾರತ ಇದು ಖಲಿಸ್ತಾನಿ ಉಗ್ರಗಾಮಿಗಳು ನಡೆಸಿದ ವಿಧ್ವಂಸಕ ಕೃತ್ಯ ಎಂದು ಕಳವಳ ವ್ಯಕ್ತಪಡಿಸಿದೆ.
ಅಲ್ಲದೇ ಈ ಸಂಬಂಧ ಇಟಾಲಿಯನ್ ಅಧಿಕಾರಿಗಳ ಜೊತೆ ಕೇಂದ್ರ ಸರ್ಕಾರ ಮಾಹಿತಿಯನ್ನ ಪಡೆದಿದೆ ಎನ್ನಲಾಗಿದೆ.
ಭಾರತೀಯ ರಾಜತಾಂತ್ರಿಕರು ಹಾಗೂ ರಾಯಭಾರಿ ಕಚೇರಿ ಸುರಕ್ಷತೆ ಇಟಾಲಿಯನ್ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಭಾರತ ನೆನಪಿಸಿದೆ. ಅಲ್ಲದೇ ಈ ಘಟನೆ ಸಂಬಂಧ ಇಟಲಿಯನ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಮಾತ್ರವಲ್ಲದೇ ಭವಿಷ್ಯದಲ್ಲಿ ಇಂತಹ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಕೆಂಪು ಕೋಟೆ ಸಮೀಪ ನಡೆದ ಹಿಂಸಾಚಾರ: 300 ಕ್ಕೂ ಅಧಿಕ ಪೊಲೀಸರಿಗೆ ಗಾಯ
ಖಲಿಸ್ತಾನಿಗಳು, ವಿಶೇಷವಾಗಿ ಸಿಖ್ ಫಾರ್ ಜಸ್ಟೀಸ್ ಎಂಬ ಕಾನೂನುಬಾಹಿರ ಗುಂಪುಗಳ ಬೆಂಬಲದೊಂದಿಗೆ ದೇಶದಲ್ಲಿ ಜಾರಿಯಾದ ಕೃಷಿ ಮಸೂದೆ ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ರೋಮ್ ನಲ್ಲಿ ಭಾರತೀಯ ರಾಯಭಾರ ಕಚೇರಿ ಎದುರು ಖಲಿಸ್ತಾನ ಬಾವುಟ ಪ್ರದರ್ಶಿಸಿದ್ದು ಮಾತ್ರವಲ್ಲದೇ ಸಂವಿಧಾನದ ಪ್ರತಿಗಳನ್ನ ಹರಿದು ಗೋಡೆಗಳ ಮೇಲೆ ಬರಹಗಳನ್ನ ಬರೆದು ಆಕ್ರೋಶ ಹೊರಹಾಕಿದ್ದಾರೆ.
ಇದು ಮಾತ್ರವಲ್ಲದೇ ಎಸ್ಎಫ್ಜೆ ನಾಯಕ ಗುರುಪತವಂತ್ ಸಿಂಗ್ ಪನ್ನು ಗಣರಾಜ್ಯೋತ್ಸವ ದಿನದಂದು ಕೆಂಪುಕೋಟೆಯಲ್ಲಿ ಹಾರಾಡುತ್ತಿದ್ದ ತ್ರಿವರ್ಣ ಧ್ವಜವನ್ನ ಇಳಿಸುವಂತೆ ಕರೆ ನೀಡಿದ್ದರು ಎನ್ನಲಾಗಿದೆ. ಅಲ್ಲದೇ ಈ ಕೃತ್ಯ ಎಸಗುವವರಿಗೆ 2.5 ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಿಸಿದ್ದರಂತೆ.