ರಷ್ಯಾದ ಸ್ಪುಟ್ನಿಕ್-ವಿ ವಿಶ್ವದ ಮೊದಲ ನೋಂದಾಯಿತ ಲಸಿಕೆ. ಲಸಿಕೆ ಯಶಸ್ವಿ ಬಗ್ಗೆ ಸುದ್ದಿ ಬರ್ತಿದ್ದಂತೆ ಭಾರತದ ವೈದ್ಯ ರೆಡ್ಡಿಸ್ ಲ್ಯಾಬ್ ಕೂಡ ರಷ್ಯಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ ಈ ಒಪ್ಪಂದಕ್ಕೆ ಹಿನ್ನಡೆಯಾಗಿದೆ.
ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್, ಈ ಲಸಿಕೆಯನ್ನು ಸಣ್ಣ ಪ್ರಮಾಣದಲ್ಲಿ ಪ್ರಯೋಗ ಮಾಡುವಂತೆ ಹೇಳಿದೆ. ವಿದೇಶದಲ್ಲಿ ಸ್ಪುಟ್ನಿಕ್-ವಿ ಯ ಪ್ರಾಥಮಿಕ ಹಂತದ ಅಧ್ಯಯನವು ಅದರ ಸುರಕ್ಷತೆ ಮತ್ತು ಇಮ್ಯುನೊಜೆನೆಸಿಟಿ ಬಗ್ಗೆ ಬಹಳ ಕಡಿಮೆ ಡೇಟಾವನ್ನು ನೀಡಿದೆ. ಇದರ ಬಗ್ಗೆ ಭಾರತೀಯ ಸ್ವಯಂ ಸೇವಕರಿಂದ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಸಣ್ಣ ಪ್ರಮಾಣದಲ್ಲಿ ಪ್ರಯೋಗ ಮಾಡುವಂತೆ ಸೂಚಿಸಲಾಗಿದೆ.
ರಷ್ಯಾದ ಲಸಿಕೆಯ ಪ್ರಯೋಗ ನಡೆಯುತ್ತಿದೆ. ಶೀಘ್ರದಲ್ಲೇ ಅದರ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗುವುದು. ಆದ್ರೆ ಭಾರತದಲ್ಲಿ ಮಾತ್ರ ಸಣ್ಣ ಮಟ್ಟದಲ್ಲಿ ಪರೀಕ್ಷೆ ನಡೆಯಲಿದೆ. ರಷ್ಯಾ ಪರೀಕ್ಷೆ ಪೂರ್ಣಗೊಳ್ಳುವ ಮೊದಲೇ ತನ್ನ ದೇಶದ ಜನರಿಗೆ ಲಸಿಕೆ ನೀಡಿದೆ. ಇದಕ್ಕೆ ವಿಶ್ವದಾದ್ಯಂತ ತಜ್ಞರು ಹಾಗೂ ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದರು.
ಸ್ಪುಟ್ನಿಕ್ – ವಿ ಲಸಿಕೆ ಜೊತೆಗೆ ರಷ್ಯಾ ಮತ್ತೊಂದು ಲಸಿಕೆ ಬಿಡುಗಡೆ ಮಾಡುವ ಸಿದ್ಧತೆ ನಡೆಸಿದೆ. ರಷ್ಯಾದಿಂದ ಬಂದ ಈ ಲಸಿಕೆಯ ಹೆಸರು ಎಪಿವಾಕ್ ಕೊರೊನಾ. ಈ ಲಸಿಕೆ ಕ್ಲಿನಿಕಲ್ ಪ್ರಯೋಗಗಳಲ್ಲಿ ಯಶಸ್ವಿಯಾಗಿದೆ. ಈ ಲಸಿಕೆಯನ್ನು ಅಕ್ಟೋಬರ್ 15 ರಂದು ಬಿಡುಗಡೆ ಮಾಡುವ ನಿರೀಕ್ಷೆಯಿದೆ.