ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಸಂಸ್ಥೆ(ECOSOC) ಮಹಿಳೆಯರ ಸ್ಥಿತಿಗತಿ ಆಯೋಗ ಸದಸ್ಯ ರಾಷ್ಟ್ರವಾಗಿ ಭಾರತವನ್ನು ಆಯ್ಕೆ ಮಾಡಲಾಗಿದೆ.
ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ, ಮಂಗಳವಾರ ಬೆಳಿಗ್ಗೆ ಈ ಬಗ್ಗೆ ಮಾಹಿತಿ ನೀಡಿದ್ದು 2021 ರಿಂದ 2025 ವರೆಗೆ ಭಾರತ 4 ವರ್ಷಗಳ ಕಾಲ UNCSW ಸದಸ್ಯ ರಾಷ್ಟ್ರವಾಗಿರಲಿದೆ.
ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ಸಂಸ್ಥೆಯಾದ ಪ್ರತಿಷ್ಠಿತ ಸಂಸ್ಥೆಗೆ ಭಾರತ ಸದಸ್ಯ ರಾಷ್ಟ್ರವಾಗಿದೆ. ಲಿಂಗ ಸಮಾನತೆ ಮತ್ತು ಮಹಿಳೆಯರ ಸಬಲೀಕರಣ ಉತ್ತೇಜಿಸುವ ಬದ್ಧತೆಯ ಭಾಗವಾಗಿ ಭಾರತಕ್ಕೆ ಅವಕಾಶ ನೀಡಲಾಗಿದೆ.
ಭಾರತ ಸದಸ್ಯ ರಾಷ್ಟ್ರವಾಗಲು ಅನುಮೋದನೆ ನೀಡಿ ಇದಕ್ಕೆ ಬೆಂಬಲ ನೀಡಿದ ಸದಸ್ಯ ರಾಷ್ಟ್ರಗಳಿಗೆ ಧನ್ಯವಾದಗಳು ಎಂದು ತಿರುಮೂರ್ತಿ ಟ್ವೀಟ್ ಮಾಡಿದ್ದಾರೆ. ಭಾರತ, ಚೀನಾ ಮತ್ತು ಅಫ್ಘಾನಿಸ್ತಾನ UNCSW ಆಯೋಗಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, 54 ಸದಸ್ಯರಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ಗಣನೀಯ ಸ್ಥಾನ ಪಡೆದರೂ ಚೀನಾ ಅರ್ಧದಷ್ಟು ಮತಗಳನ್ನು ಕೂಡ ದಾಟಲು ಸಾಧ್ಯವಾಗಲಿಲ್ಲ. ಈ ಹಿಂದೆ 7 ಬಾರಿ ಭಾರತ UNSC ಗೆ ಆಯ್ಕೆಯಾಗಿತ್ತು.