ನವದೆಹಲಿ: ಭಾರತ, ವಿಶ್ವದ ಹಲವು ದೇಶಗಳ ವಿಶ್ವಾಸವನ್ನು ಗಳಿಸಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹೇಳಿದ್ದಾರೆ.
ಭಾರತ, ಚೀನಾದಿಂದ ಜಾಗತಿಕ ಪೂರೈಕೆ ಸರಪಳಿ ಆಕರ್ಷಿಸಬಹುದು. ಆಗ ಚೀನಾ ಕಂಪನಿಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಅಮೆರಿಕ – ಭಾರತದಂತಹ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ತಿಳಿಸಿದ್ದಾರೆ.
ಅಮೆರಿಕ ಇಂಡಿಯಾ ಬಿಜಿನೆಸ್ ಕೌನ್ಸಿಲ್ ಆಯೋಜಿಸಿದ್ದ ಇಂಡಿಯಾ ಐಡಿಯಾ ವರ್ಚುಯಲ್ ಶೃಂಗಸಭೆಯಲ್ಲಿ ಮಾತನಾಡಿದ ಮೈಕ್ ಪಾಂಪಿಯೋ, ಭಾರತ ನಂಬಿಗಸ್ತ ಸಮಾನ ಮನಸ್ಕ ರಾಷ್ಟ್ರಗಳಲ್ಲಿ ಒಂದಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿದೇಶಾಂಗ ನೀತಿಯ ಪ್ರಮುಖ ಆಧಾರಸ್ತಂಭವಾಗಿದೆ. ಅಮೆರಿಕ ಭಾರತದೊಂದಿಗಿನ ತನ್ನ ಸಂಬಂಧದಲ್ಲಿ ಹೊಸ ಮಹತ್ವಾಕಾಂಕ್ಷೆಯನ್ನು ಬಯಸುತ್ತದೆ ಎಂದು ಹೇಳಿದ್ದಾರೆ.
ಇಂಡೋ -ಫೆಸಿಪಿಕ್ ಮತ್ತು ಜಾಗತಿಕವಾಗಿ ಭಾರತ ಅಮೆರಿಕದೊಂದಿಗೆ ರಕ್ಷಣೆ ಮತ್ತು ಭದ್ರತೆಯ ಪ್ರಮುಖ ಪಾಲುದಾರನಾಗಿದೆ ಎಂದು ತಿಳಿಸಿದ್ದಾರೆ.