alex Certify ಚಂದ್ರನ ಸುತ್ತ ಕಾಮನಬಿಲ್ಲು ಮೂಡುವ ಅಪರೂಪದ ಬಾಹ್ಯಾಕಾಶ ದೃಶ್ಯಕಾವ್ಯ ಇದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಂದ್ರನ ಸುತ್ತ ಕಾಮನಬಿಲ್ಲು ಮೂಡುವ ಅಪರೂಪದ ಬಾಹ್ಯಾಕಾಶ ದೃಶ್ಯಕಾವ್ಯ ಇದು

ಕಾಮನ ಬಿಲ್ಲಿನಿಂದ ಆವೃತ್ತವಾದ ಚಂದ್ರನ ಚಿತ್ರವೊಂದನ್ನು ಸೆರೆ ಹಿಡಿದಿರುವ ಇಟಲಿಯನ್ ಛಾಯಾಗ್ರಾಹಕರೊಬ್ಬರು ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಚಂದ್ರನಿಂದ ಪ್ರತಿಫಲನಗೊಂಡ ಬೆಳಕನ್ನು ಸುತ್ತಲಿನ ಹಿಮ ಅಥವಾ ನೀರಿನ ಕಣಗಳು ಸೀಳುವುದರಿಂದ ’ಲೂನಾರ್‌ ಕೊರೋನಾ’ ಹೆಸರಿನ ಈ ಅತ್ಯಪರೂಪದ ಘಟನೆ ಸಂಭವಿಸುತ್ತದೆ. ಈ ಅದ್ಭುತ ಚಿತ್ರವನ್ನು ಉತ್ತರ ಇಟಲಿಯ ಪರ್ಮಾ ಪ್ರದೇಶದಲ್ಲಿ ಛಾಯಾಗ್ರಾಹಕ ಆಲ್ಬರ್ಟೋ ಘಿಜ್ಜಿ ಪನಿಜ್ಜಾ ಸೆರೆ ಹಿಡಿದಿದ್ದಾರೆ.

“ನಾನು ಈ ದೃಶ್ಯವನ್ನು ಹಲವಾರು ಬಾರಿ ಕಂಡಿದ್ದೇನೆ. ಆದರೆ ಛಾಯಾಚಿತ್ರ ಸೆರೆ ಹಿಡಿಯಲು ಯಾವತ್ತೂ ಸಾಧ್ಯವಾಗಿರಲಿಲ್ಲ. ಈ ಬಾರಿ ಲಾಕ್‌ಡೌನ್ ಕಾರಣದಿಂದ ಈ ವಿದ್ಯಮಾನವನ್ನು ಮನೆಯಿಂದಲೇ ನೋಡುತ್ತಿದ್ದ ವೇಳೆ ನನ್ನ ಬಳಿಕ ಈ ಅಪರೂಪದ ದೃಶ್ಯ ಸೆರೆ ಹಿಡಿಯಲು ಬೇಕಿದ್ದ ಎಲ್ಲ ಸಲಕರಣೆಗಳು ಇದ್ದವು. 10-12 ಗಂಟೆಯ ನಡುವೆ ನಾನು ನೂರಾರು ಚಿತ್ರಗಳನ್ನು ಸೆರೆ ಹಿಡಿದೆ,” ಎಂದು 45 ವರ್ಷದ ಛಾಯಾಗ್ರಾಹಕ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...