ಒಂಬತ್ತು ವರ್ಷದ ಮಾಯಾ ಗೆಬ್ಲೆರ್‌ಗೆ ಕೊರೋನಾ ಲಾಕ್‌ಡೌನ್ ಅವಧಿಯಲ್ಲಿ ಸ್ನೇಹಿತರು ಹಾಗೂ ಪ್ರೀತಿಪಾತ್ರರೊಂದಿಗಿನ ಒಡನಾಟ ಕ್ಷೀಣಿಸಿಬಿಟ್ಟಿದೆ. ತನ್ನ ಮಾನವ ಬಂಧುಗಳು ಜೊತೆಗೆ ಸಂಪರ್ಕ ಕಡಿಮೆಯಾದ ಬಳಿಕ ಮಾರಾ ಫೇರೀಗಳಿಗೆ ಪತ್ರ ಬರೆಯಲು ಆರಂಭಸಿದ್ದಾಳೆ.
ವರ್ಜೀನಿಯಾದಲ್ಲಿರುವ ಮಾಯಾ ಮನೆ ಬಳಿಯ ಪ್ರದೇಶವೊಂದರಲ್ಲಿರುವ ಮರಗಳ ಮೇಲೆ ಫೇರೀಗಳು ನೆಲೆಸಿವೆ ಎಂದು ನಂಬಲಾಗಿದ್ದು, ಅವುಗಳೊಂದಿಗೆ ಸಂವಹನ ನಡೆಸುತ್ತಿದ್ದಾಳೆ ಈ ಬಾಲಕಿ. ಫೇರೀ ವಿಲೇಜ್ ಎಂಬ ಈ ಊರಿನಲ್ಲಿ ಫೇರೀಗಳು ನೆಲೆಸಿದ್ದು, ಅವುಗಳೊಂದಿಗೆ ಸಂವಹನ ನಡೆಸಿ, ಕೋರೋನಾ ಸಾಂಕ್ರಮಿಕವನ್ನು ಎದುರಿಸಲು ಸಲಹೆಗಳನ್ನು ಕೇಳುತ್ತಾರೆ ಮಕ್ಕಳು.
ಪತ್ರಕರ್ತೆ ಹಾಗೂ ಮಕ್ಕಳ ಕಥೆಗಳನ್ನು ಬರೆಯುವ ಲೇಖಕಿ ಲಿಸಾ ಸುಹೇ ಮನೆಯ ಹೊರಗಡೆ ಈ ಫೇರೀ ವಿಲೇಜ್ ಇದೆ. ಇಲ್ಲಿಗೆ ಮಕ್ಕಳು ಥರಾವರಿ ಬಟ್ಟೆಗಳನ್ನು ಧರಿಸಿ ಬರುತ್ತಾರೆ. ದೂರದೂರುಗಳಲ್ಲಿ ನೆಲೆಸಿರುವ ಮಕ್ಕಳನ್ನು ಕನೆಕ್ಟ್ ಮಾಡಲು ಜಾಲತಾಣವನ್ನೂ ಸಹ ಮೇಂಟೇನ್ ಮಾಡಲಾಗಿದೆ.