ಕೊರೋನಾ ಸಾಂಕ್ರಮಿಕ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಮಾಸ್ಕ್ ಧರಿಸುವುದು ಕಡ್ಡಾಯವಾಗುತ್ತಿದೆ, ಮಾಸ್ಕ್ ಧರಿಸದೆ ಹೋದಲ್ಲಿ ದೈಹಿಕವಾಗಿ ದಂಡಿಸುವ ಅಥವಾ ದಂಡ ವಸೂಲಿ ಮಾಡುವ ಕಠಿಣ ಕಾನೂನುಗಳು ಸಹ ವಿವಿಧ ದೇಶಗಳಲ್ಲಿ ಜಾರಿಯಲ್ಲಿದೆ.
ನೆರೆಯ ಪಾಕಿಸ್ತಾನದಲ್ಲಿ ಮಾತ್ರ ವಿಶೇಷ ಶಿಕ್ಷೆ ನೀಡಲಾಗುತ್ತಿದೆ, ಮಾಸ್ಕ್ ಧರಿಸದೇ ರಸ್ತೆಗಿಳಿದರೆ ಅಂತವರಿಗೆ ಹೈ ಫ್ರಿಕ್ವೆನ್ಸಿ ಶಾಕ್ ನೀಡಲಾಗುತ್ತಿದೆ.
ಅಲ್ಲಿನ ಫೈಸಲಾಬಾದ್ ನಲ್ಲಿ ನಿಯಮ ಉಲ್ಲಂಘಿಸುವವರನ್ನು ಶಿಕ್ಷಿಸಲು ಪೊಲೀಸರು ಮತ್ತು ಜಿಲ್ಲಾಡಳಿತವು ವಿಶೇಷ ಸಾಧನ ಬಳಸುತ್ತಿದೆ. ಹೈ ಫ್ರಿಕ್ವೆನ್ಸಿ ಶಾಕ್ ನೀಡುವ ಸಾಧನ ಬಳಸಿದ್ದಕ್ಕಾಗಿ ಟೀಕೆಗಳನ್ನು ಸಹ ಎದುರಿಸುತ್ತಿದ್ದಾರೆ.
ಈ ಸಾಧನ ಬಳಸಿದಾಗ ಸಡನ್ ಕರೆಂಟ್ ಹೊಡೆದು ಸತ್ತ ಅನುಭವವಾಗುತ್ತದೆ ಎಂದು ಅಲ್ಲಿನ ಜನ ತಮ್ಮ ಅನುಭವ ಹೇಳಿಕೊಂಡಿದ್ದಾರೆ..
https://www.youtube.com/watch?time_continue=2&v=EuCw_fn9Smc&feature=emb_logo