ವಿಶ್ವದಾದ್ಯಂತ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಕೊರೊನಾದಿಂದ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾಗೆ ಲಸಿಕೆ ಬರುವವರೆಗೂ ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಧರಿಸದ ಜನರಿಗೆ ಶಿಕ್ಷೆ ನೀಡಲಾಗ್ತಿದೆ.
ಇಂಡೋನೇಷ್ಯಾದಲ್ಲಿ ಮಾಸ್ಕ್ ಧರಿಸದ ಜನರಿಗೆ ವಿಶೇಷ ಶಿಕ್ಷೆ ನೀಡಲಾಗ್ತಿದೆ. ಪೂರ್ವ ಜಾವಾ ಪ್ರಾಂತ್ಯದ ಆಡಳಿತವು, ಮಾಸ್ಕ್ ಧರಿಸದ ವ್ಯಕ್ತಿ, ಕೊರೊನಾದಿಂದ ಸಾವನ್ನಪ್ಪಿದ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಸಮಾಧಿ ತೆಗೆಯಬೇಕೆಂದು ಆದೇಶ ನೀಡಿದೆ. ಪೂರ್ವ ಜಾವಾದ ಜೆರ್ಸಿಕ್ ರೀಜೆನ್ಸಿಯ ಎಂಟು ಜನರು ಮಾಸ್ಕ್ ಧರಿಸಲು ನಿರಾಕರಿಸಿದ್ದರು.
ಇವ್ರಿಗೆ ಶಿಕ್ಷೆಯ ರೂಪದಲ್ಲಿ ಹತ್ತಿರದ ನೊಬಟಿಯಾನ್ ಗ್ರಾಮದ ಸಾರ್ವಜನಿಕ ಸ್ಮಶಾನದಲ್ಲಿ ಸಮಾಧಿಗಳನ್ನು ತೆಗೆಯುವ ಶಿಕ್ಷೆ ವಿಧಿಸಲಾಗಿದೆ. ಕೊರೊನಾ ರೋಗಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಯಾರಿಗೂ ಅನುಮತಿ ಇಲ್ಲ. ಹಾಗಾಗಿ ಸಮಾಧಿ ತೆಗೆಯುವವರ ಸಂಖ್ಯೆ ಕಡಿಮೆಯಾಗಿದೆ. ಜನರು ಸಮಾಧಿ ಸಿದ್ಧಪಡಿಸಲು ಮುಂದೆ ಬರ್ತಿಲ್ಲ. ಮಾಸ್ಕ್ ಧರಿಸದವರಿಗೆ ಈ ಶಿಕ್ಷೆ ನೀಡಿ ಅಲ್ಲಿನ ಸರ್ಕಾರ ಕೆಲಸ ಸುಲಭಗೊಳಿಸುತ್ತಿದೆ.