alex Certify 5 ನೇ ಶತಮಾನದಲ್ಲಿ‌ ಮುಳುಗಿದ ಹಡಗು ಈಗ ನೀರಿನಡಿಯ ಮ್ಯೂಸಿಯಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

5 ನೇ ಶತಮಾನದಲ್ಲಿ‌ ಮುಳುಗಿದ ಹಡಗು ಈಗ ನೀರಿನಡಿಯ ಮ್ಯೂಸಿಯಂ

ಅಥೆನ್ಸ್‌: ಐದನೇ ಶತಮಾನದಲ್ಲಿ ಮುಳುಗಡೆಯಾಗಿದ್ದ ಹಡಗಿನ ಅವಶೇಷಗಳು ಈಗ ಗ್ರೀಸ್ ನ ಸಮುದ್ರದಾಳದ ಮೊದಲ ವಸ್ತು ಸಂಗ್ರಹಾಲಯವಾಗಿದೆ.

ಪಶ್ಚಿಮ ಅಗೇನಾದ ಅಲೊನಿಸಾಸ್ ದ್ವೀಪ ತೀರದ ಸಮೀಪ ಕಡಲಲ್ಲಿ 28 ಮೀಟರ್ ಆಳದಲ್ಲಿರುವ ಹಡಗಿನ ಅವಶೇಷಗಳನ್ನು 1985 ರಲ್ಲೇ ಸ್ಥಳೀಯ ಮೀನುಗಾರರು ಪತ್ತೆ ಹಚ್ಚಿದ್ದರು. ಆದರೆ, ಇಲ್ಲಿವರೆಗೆ ಸಂಶೋಧಕರು ಮತ್ತು ವಿಜ್ಞಾನಿಗಳಿಗಷ್ಟೇ ಈ ಹಡಗಿನ ಪಳೆಯುಳಿಕೆಯನ್ನು ವೀಕ್ಷಿಸಲು ಅವಕಾಶವಿತ್ತು. ಸಾರ್ವಜನಿಕರಿಗೆ ಈಗ ಆಗಸ್ಟ್ 3 ರಿಂದ ಅಕ್ಟೋಬರ್ 2 ರವರೆಗೆ ನೋಡಲು ಅವಕಾಶ ಕಲ್ಪಿಸಲಾಗಿದೆ.

ಗ್ರೀಸ್ ನ ಸಾಂಸ್ಕೃತಿಕ ಇಲಾಖೆ ಸಚಿವೆ ಲೀನಾ ಮೆಂಡೋನಿ ಹಾಗೂ ಅಧಿಕಾರಿಗಳು ಶನಿವಾರ ಪೆಂಥಾನ್ ಆಫ್ ಶಿಪ್ ವ್ರೆಕ್ಸ್ ಎಂಬ ಹೆಸರಿನ ಈ ನೀರಿನೊಳಗಿನ ಮ್ಯೂಸಿಯಂ ಉದ್ಘಾಟಿಸಿದರು.‌ ಸ್ಕೂಬಾ ಡೈವಿಂಗ್ ಮಾಡಿಕೊಂಡು ಅಥವಾ ಈಜಿಕೊಂಡು ತೆರಳಿ ಇದನ್ನು ವೀಕ್ಷಿಸಬಹುದಾಗಿದೆ. 5 ನೇ ಶತಮಾನದಲ್ಲಿ ಅಂದರೆ ಸುಮಾರು ಕ್ರಿಸ್ತ ಪೂರ್ವ 425 ರಲ್ಲಿ ಸಾವಿರಾರು ವೈನ್ ಜಾರುಗಳನ್ನು ಹೊತ್ತು ಮೆಂಡಿ ಅಥವಾ ಹಲ್ಕಿಡಿಕಿ ನಗರದಿಂದ ಹೊರಟಿದ್ದ ಹಡಗು ಹವಾಮಾನ ವೈಪರೀತ್ಯಕ್ಕೆ ತುತ್ತಾಗಿ ಮುಳುಗಿರಬಹುದು ಎನ್ನಲಾಗಿದೆ. ಐದನೇ ಶತಮಾನದ ಅವಧಿಯಲ್ಲಿ ಗ್ರೀಸ್ ಅಥವಾ ರೋಮನ್ನರು ಬಳಸುತ್ತಿದ್ದ ಉದ್ದ ಕುತ್ತಿಗೆಯ ಜಾರ್ ಅಥವಾ ಕುಡಿಕೆಗಳು ಹಡಗಿನ ತುಂಬಾ ಇನ್ನೂ ಕಾಣಸಿಗುತ್ತವೆ.‌

https://www.instagram.com/p/CC_gHwnJeX3/?utm_source=ig_embed

https://www.instagram.com/p/CDONJkBJN7s/?utm_source=ig_embed

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...