
ತಮ್ಮ ಮಾಲೀಕರು ಹೆಚ್ಚಿನ ಸಮಯವನ್ನು ಮನೆಯಲ್ಲೇ ಕಳೆಯೋದ್ರಿಂದ ಶ್ವಾನಗಳು ಚೇಷ್ಟೆ ಮಾಡುತ್ತಾ ಎಂಜಾಯ್ ಮಾಡ್ತಿವೆ. ಹೀಗಾಗಿ ಈ ವರ್ಷ ಸಾಕಷ್ಟು ಶ್ವಾನಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಪ್ರತಿಷ್ಟಿತ ಟ್ವಿಟರ್ ಅಕೌಂಟ್ ವಿ ರೇಟ್ ಡಾಗ್ಸ್ನಲ್ಲಿ 2020ರ ಫೇಮಸ್ ಶ್ವಾನಗಳ ವಿಡಿಯೋವನ್ನ ಪೋಸ್ಟ್ ಮಾಡಲಾಗಿದೆ, ಈ ವಿಡಿಯೋದಲ್ಲಿ ಈ ವರ್ಷ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ ಎಲ್ಲಾ ಶ್ವಾನಗಳ ವಿಡಿಯೋವನ್ನ ಮಿಕ್ಸ್ ಮಾಡಲಾಗಿದ್ದು ನೆಟ್ಟಿಗರ ಮನ ಗೆದ್ದಿದೆ.