ಪ್ರೌಢ ಶಾಲಾ ಶಿಕ್ಷಣ ಮುಗಿಸಿದ ನೆನಪಿಗೆ ಶಾಲೆಯಿಂದ ಪಡೆದುಕೊಂಡಿದ್ದ ಉಂಗುರವೊಂದನ್ನು ಕಳೆದುಕೊಂಡಿದ್ದ ಯುವತಿಗೆ ಅದು 18 ವರ್ಷಗಳ ಬಳಿಕ ಸಿಕ್ಕ ಘಟನೆ ಫ್ಲಾರಿಡಾದಲ್ಲಿ ಜರುಗಿದೆ.
2002ರಲ್ಲಿ, ಫ್ಲಾರಿಡಾ ಬೀಚ್ ಟ್ರಿಪ್ ಸಂದರ್ಭದಲ್ಲಿ ಕಳೆದುಕೊಂಡಿದ್ದ ಈ ಉಂಗುರದೊಂದಿಗೆ ಅಮಿ ಗೋಟ್ಝ್ ಮನೆಗೆ ಆಗಮಿಸಿದ ಪೊಲೀಸರು, ಆಕೆಯನ್ನು ಕೆಲ ಪ್ರಶ್ನೆಗಳನ್ನು ಕೇಳಿ, ಅದು ಆಕೆಯದ್ದೇ ಎಂದು ಖಾತ್ರಿ ಪಡಿಸಿಕೊಂಡು ಮರಳಿಸಿದ್ದಾರೆ.
ತನ್ನ ಈ ಸ್ಮರಣೀಯ ವಸ್ತು ವಾಪಸ್ ಸಿಕ್ಕ ಆನಂದಕ್ಕೆ ಪಾರವೇ ಇಲ್ಲದಂತಾಗಿ, ಆ ಖುಷಿಯನ್ನು ಅಮಿ ಈಗ ಫೇಸ್ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಉಂಗುರ ಸಿಕ್ಕ ವ್ಯಕ್ತಿಯು ಅದನ್ನು ತನಗೆ ಹಿಂದಿರುಗಿಸಲು ಮಾಡಿದ ಅಷ್ಟೂ ಯತ್ನಕ್ಕೆ ದೊಡ್ಡದೊಂದು ಥ್ಯಾಂಕ್ಸ್ ಎಂದು ಹೇಳಿಕೊಂಡಿದ್ದಾರೆ ಅಮಿ.
https://www.facebook.com/amywii/posts/10157420645780905