ಕೋವಿಡ್-19 ಸೋಂಕು ತಡೆಗಟ್ಟಲು ಸಂಶೋಧಿಸಲಾಗುತ್ತಿರುವ ಲಸಿಕೆಗಳ ಮೇಲೆ ಅದಾಗಲೇ ಸಾಕಷ್ಟು ಅನುಮಾನಗಳು ಎದ್ದಿವೆ. ಈ ಅನುಮಾನಗಳನ್ನು ಪುಷ್ಟೀಕರಿಸುವ ಹೇಳಿಕೆಯೊಂದನ್ನು ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೋ ಕೊಟ್ಟಿದ್ದಾರೆ.
ಏಕಕಾಲದಲ್ಲಿ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಗೊಂಡ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೈರ್, “ನಾನು ಹೇಳುತ್ತಿದ್ದೇನೆ ನಿಮಗೆ, ನಾನು ಲಸಿಕೆ ತೆಗೆದುಕೊಳ್ಳುವುದಿಲ್ಲ, ಅದು ನನ್ನ ಹಕ್ಕು” ಎಂದು ತಿಳಿಸಿದ್ದಾರೆ.
ಸೋಂಕು ವ್ಯಾಪಿಸುವುದನ್ನು ತಡೆಗಟ್ಟಲು ಮಾಸ್ಕ್ ಹಾಕಿಕೊಳ್ಳುವುದರಿಂದ ಅಷ್ಟೇನೂ ಪರಿಣಾಮ ಆಗದು ಎಂದು ಜೈರ್ ಇದೇ ವೇಳೆ ತಿಳಿಸಿದ್ದಾರೆ.
ಕೋವಿಡ್-19 ಲಸಿಕೆ ದೊಡ್ಡ ಮಟ್ಟದಲ್ಲಿ ದೊರಕಿದ ವೇಳೆ ಅದನ್ನು ಹಾಕಿಸಿಕೊಳ್ಳುವ ಅಗತ್ಯ ಬ್ರೆಜಿಲ್ ದೇಶದ ಜನರಿಗೆ ಬೀಳುವುದೇ ಇಲ್ಲ ಎಂದು ಜೈರ್ ತಿಳಿಸಿದ್ದು, ಬಹುಶಃ ಈ ಲಸಿಕೆ ತಮ್ಮ ನಾಯಿಗೆ ಬೇಕಾಗಬಹುದು ಎಂದು ಅಣಕವಾಡಿದ್ದಾರೆ. ಅತಿ ಹಚ್ಚು ಕೋವಿಡ್-19 ಸೋಂಕಿತರು ಇರುವ ದೇಶಗಳ ಪಟ್ಟಿಯಲ್ಲಿ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ.