ಅವಳಿಗಳು 36 ವರ್ಷದ ಬಳಿಕ ಪರಸ್ಪರ ಭೇಟಿಯಾದ ವಿಶೇಷ ಸಂಗತಿಯೊಂದು ದಕ್ಷಿಣ ಕೊರಿಯಾದಲ್ಲಿ ವರದಿಯಾಗಿದೆ.
ಅವಳಿಗಳಾದ ಮೊಲ್ಲಿ ಸಿನೆರ್ಟ್ ಮತ್ತು ಎಮಿಲಿ ಬುಶ್ನೆಲ್ ಅವರನ್ನು ಹುಟ್ಟಿನ ಬಳಿಕ ಬೇರೆ ಬೇರೆ ಕುಟುಂಬ ದತ್ತು ಪಡೆದುಕೊಂಡಿದ್ದವು. ಹೀಗಾಗಿ ಅವರು ತಮ್ಮ ಜೀವನದ ಬಹುಪಾಲು ಸಮಯದಲ್ಲಿ ಪರಸ್ಪರ ಅರಿವಿಲ್ಲದೆ ಕಳೆದರು. ಆದರೆ ಇತ್ತೀಚೆಗೆ, ಸಹೋದರಿಯರು ತಮ್ಮ 36 ನೇ ಹುಟ್ಟುಹಬ್ಬದಂದು ಮೊದಲ ಬಾರಿಗೆ ಮತ್ತೆ ಒಂದಾದರು.
ಇಬ್ಬರೂ ಒಂದೇ ರೀತಿ ಕಾಣುತ್ತಾರಾದರೂ ಅವರು ಅವಳಿ ಮಕ್ಕಳು ಎಂದು ತಿಳಿದಿರಲಿಲ್ಲ. ಡಿಎನ್‌ಎ ಪರೀಕ್ಷೆಯ ಮೂಲಕ ಇಬ್ಬರೂ ತಮ್ಮ ಇತಿಹಾಸದ ಮಾಹಿತಿಯನ್ನು ಪ್ರತ್ಯೇಕವಾಗಿ ಹುಡುಕಲು ಪ್ರಾರಂಭಿಸುವವರೆಗೂ ಅವರಿಗೆ ತಮ್ಮ ಹಿಂದಿನ ವೃತ್ತಾಂತದ ಬಗ್ಗೆ ತಿಳಿದಿರಲಿಲ್ಲವಂತೆ.
ಮನೆಯಲ್ಲೇ ಕುಳಿತು ಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳುವುದು ಹೇಗೆ…? ಇಲ್ಲಿದೆ ಸಂಪೂರ್ಣ ಮಾಹಿತಿ
ಅಂತಿಮವಾಗಿ ಇಮೇಲ್‌ಗಳು ಮತ್ತು ಚಾಟ್‌ಗಳ ಮೂಲಕ ಪರಸ್ಪರರ ಮಾಹಿತಿಯನ್ನು ದೃಢೀಕರಿಸಿದ ಮೇಲೆ ವೈಯಕ್ತಿಕವಾಗಿ ಭೇಟಿಯಾಗಿ, ಈ ವರ್ಷ ತಮ್ಮ ಜನ್ಮದಿನ ಆಚರಿಸಲು ನಿರ್ಧರಿಸಿದರು.
ಮಾಧ್ಯಮ ವರದಿಯ ಪ್ರಕಾರ, ಅಂದು ಎರಡು ಶಿಶುಗಳನ್ನು ಏಕೆ ಬೇರ್ಪಡಿಸಲಾಯಿತೆಂದು ಸ್ಪಷ್ಟವಾಗಿಲ್ಲ. ದುರದೃಷ್ಟವಶಾತ್, ಅವರು ಸಾವಿರಾರು ಕಿ.ಮೀ. ಅಂತರದಲ್ಲಿ ಬೆಳೆಯುತ್ತಿದ್ದರು. ಸಿನೆರ್ಟ್‌ರನ್ನು ಫ್ಲೋರಿಡಾದ ಯಹೂದಿ ಕುಟುಂಬ ದತ್ತು ಪಡೆದರೆ, ಬುಶ್ನೆಲ್ ಅವರನ್ನು ಪೆನ್ಸಿಲ್ವೇನಿಯಾದ ಯಹೂದಿ ಕುಟುಂಬ ದತ್ತು ಪಡೆದಿತ್ತು.