ಅಮೆರಿಕದ ಮಸ್ಸಾಚುಸೆಟ್ಸ್ ರಾಜ್ಯದ ನರ್ಸ್ ಒಬ್ಬರು ಬೋಸ್ಟನ್‌ನ ಕಾನ್ಸ್‌ಸ್ಟಿಟ್ಯೂಷನ್ ಕಡಲತೀರದಲ್ಲಿ ನಡೆದುಕೊಂಡು ಹೋಗುವ ವೇಳೆ ಕೆಸರಿನಲ್ಲಿ ಸಿಲುಕಿಕೊಂಡಿದ್ದು, ಇಡೀ ದೇಶ ಸದ್ಯದ ಮಟ್ಟಿಗೆ ಇರುವ ಮೂಡ್ ಅನ್ನು ಈ ದೃಶ್ಯ ಪ್ರತಿಬಿಂಬಿಸುತ್ತಿದೆ.
ಕ್ಯಾಮಿಲ್ಲಿ ಕೊಲ್ಹೋ, ಅವರು ಸಮುದ್ರಗಲ್ಲುಗಳ ಹುಡುಕಾಟದಲ್ಲಿ ತೀರದ ಬಳಿ ಹಾಗೇ ಓಡಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕೆಳ ಅಲೆಯ ಬದಿಯಲ್ಲಿ ಸಿಲುಕಿಕೊಂಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಆಕೆ ಮಂಡಿಯುದ್ದದಷ್ಟು ಕೆಸರಿನಲ್ಲಿ ಸಿಲುಕಿಕೊಂಡಿದ್ದಾರೆ. ಕೂಡಲೇ ಅಲ್ಲಿದ್ದ ಸ್ಥಳೀಯರು ಕೋಲ್ಹೋ ನೆರವಿಗೆ ಧಾವಿಸಿದ್ದಾರೆ.
ತಮ್ಮ ಕೈಯಲ್ಲಿ ಕೆಸರಿನಿಂದ ಆಕೆಯನ್ನು ಮೇಲೆತ್ತಲು ಸಾಧ್ಯವಾಗದೇ ಇದ್ದ ವೇಳೆ ವೃತ್ತಿಪರರನ್ನು ಕರೆಯಿಸಿದ್ದಾರೆ ಸ್ಥಳೀಯರು. ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಆಕೆಯನ್ನು ಬದಿಯಿಂದ ಮೇಲೆತ್ತಿ ರಕ್ಷಿಸಿದ್ದಾರೆ.
ತನ್ನ ಈ ಕಾರ್ಯದಿಂದ ಎಲ್ಲರ ಹೃದಯ ಗೆದ್ದ ಡೆಲಿವರಿ ಬಾಯ್
ಸಾಂಕ್ರಮಿಕದ ವೇಳೆ ಹಗಲು-ರಾತ್ರಿ ಎನ್ನದೇ ದುಡಿಯುತ್ತಿರುವ ಕೊಲ್ಹೋಗೆ ಕಳೆದೊಂದು ವರ್ಷ ವಿಪರೀತ ಹೋರಾಟದ ವರ್ಷವಾಗಿತ್ತಂತೆ. ಹೀಗಾಗಿ ಯಾರಾದರೂ ಮಾಸ್ಕ್ ಹಾಕಿಕೊಳ್ಳಲು ನಕಾರ ತೋರಿದರೆ ಕೊಲ್ಹೋಗೆ ವಿಪರೀತ ಸಿಟ್ಟು.
“ಕಳೆದ ಒಂದು ವರ್ಷ ಬಹಳ ಯಾತನಾಮಯವಾಗಿತ್ತು. ನಾನು ಇದನ್ನು ಹೇಗೆ ವಿವರಿಸಲಿ? ನಾವೆಲ್ಲಾ ಹೋರಾಡುತ್ತಿದ್ದೇವೆ. ಜನರಿಗೆ ಸಹಾಯವಾಗಲು ನಾವು ಬಹಳ ದಣಿಯುತ್ತಿದ್ದೇವೆ, ಆದರೂ ಅವರು ಹೋರಾಡುತ್ತಾ ಮೃತಪಡುತ್ತಿರುವುದನ್ನೂ ನೋಡಬೇಕಾಗಿದೆ”
“ಮಾಸ್ಕ್ ಹಾಕದೇ ಇರುವುದು ಎಲ್ಲಾ ಆಸ್ಪತ್ರೆಗಳು, ದಿನಸಿ ಅಂಗಡಿಗಳು, ತುರ್ತು ಸೇವಾ ಸಿಬ್ಬಂದಿಗೆಲ್ಲಾ ಅವಮಾನ ಮಾಡಿದಂತೆ. ಏಕೆಂದರೆ ಕೊರೋನಾ ವೈರಸ್ ಎಷ್ಟು ವಿಧ್ವಂಸಕಾರಿ ಎಂಬದು ಅವರಿಗೆ ಗೊತ್ತಿದೆ” ಎಂದು ಕೊಲ್ಹೋ ತಿಳಿಸಿದ್ದಾರೆ.