ಬರೋಬ್ಬರಿ 800 ವರ್ಷಗಳ ಬಳಿಕ ಯುರೋಪ್ನ ಐಸ್ಲ್ಯಾಂಡ್ನಲ್ಲಿ ಜ್ವಾಲಾಮುಖಿ ಸ್ಪೋಟಗೊಂಡಿದೆ. ಕೊತ ಕೊತ ಕುದಿಯುತ್ತಿರುವ ಲಾವಾರಸ ಮೈಲುಗಟ್ಟಲೇ ದೂರ ಹರಡಿದೆ.
ವರದಿಗಳ ಪ್ರಕಾರ, ರೇಕ್ಜನೆಸ್ ಪರ್ಯಾಯ ದ್ವೀಪದ ಫಾಗ್ರಾಡಾಲ್ಸ್ ಫಾಲ್ನಲ್ಲಿ ಉಂಟಾದ ಬಿರುಕು ಸುಮಾರು 500 ರಿಂದ 700 ಮೀಟರ್ ಉದ್ದವಿದೆ.
ಈ ಜ್ವಾಲಾಮುಖಿ ಸ್ಪೋಟದಿಂದಾಗಿ ರೇಕ್ಜಾವಿಕ್ನಿಂದ ನೈರುತ್ಯಕ್ಕೆ ಸುಮಾರು 30 ಕಿಲೋಮೀಟರ್ ದೂರದವರೆಗಿನ ಪ್ರದೇಶದಲ್ಲಿ ನಡುಕ ಹೆಚ್ಚಾಗಿದೆ.
ಅದೃಷ್ಟವಶಾತ್ ಈ ಜ್ವಾಲಾಮುಖಿ ಸ್ಪೋಟದಿಂದ ಯಾವುದೇ ದುರಂತ ಸಂಭವಿಸಿಲ್ಲ. ಜ್ವಾಲಾಮುಖಿ ಸ್ಪೋಟದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಐಎಂಒ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಮಾರ್ಚ್ 19ರ ರಾತ್ರಿ 8.45ರ ಸುಮಾರಿಗೆ ಈ ಜ್ವಾಲಾಮುಖಿ ಸ್ಫೋಟ ಉಂಟಾಗಿದೆ. ಅಲ್ಲದೇ ಈ ಪ್ರದೇಶದಿಂದ 1.2 ಕಿಲೋಮೀಟರ್ ದೂರದವರೆಗೆ 3.1 ತೀವ್ರತೆಯ ಭೂಕಂಪ ಸಂಭವಿಸಿದೆ.