ಇತ್ತೀಚಿನ ದಿನಗಳಲ್ಲಿ ಚಿತ್ರವಿಚಿತ್ರವಾದ ಪ್ರಯೋಗಗಳಿಂದ ಹೊರಹೊಮ್ಮಿದ ಖಾದ್ಯಗಳನ್ನು ನೋಡಬೇಕಾದ ಪರಿಸ್ಥಿತಿ ನೆಟ್ಟಿಗರಿಗೆ ಸೃಷ್ಟಿಯಾಗಿದೆ.
ಗುಲಾಬಿ ಫ್ಲೇವರ್ ಮ್ಯಾಗಿ, ನುಟೆಲ್ಲಾ ಬಿರಿಯಾನಿ, ಗುಲಾಬ್ ಜಾಮೂನ್ ವಡಾಪಾವ್, ಓರಿಯೋ ಸಮೋಸಾ, ಚಾಕಲೇಟ್ ದೋಸೆ ಹಾಗೂ ಜಾಮೂನ್ ಪಿಝ್ಝಾಗಳೆಂಬ ವಿಚಿತ್ರವಾದ ಫ್ಯೂಶನ್ ಫುಡ್‌ಗಳು ಸದ್ದು ಮಾಡುತ್ತಿವೆ.
ಇದೀಗ ಐಸ್‌ಕ್ರೀಂಗೂ ಸಹ ಇಂಥ ವಿಚಿತ್ರ ಪ್ರಯೋಗಗಳು ವಕ್ಕರಿಸಿವೆ. ಮಾಂಸದ ಫ್ಲೇವರ್ ಇರುವ ಐಸ್‌ಕ್ರೀಂ ಒಂದನ್ನು ಮಿನ್‌ಸ್ಕ್‌ನ ಹೈನುಗಾರಿಕೆ & ಮಾಂಸೋದ್ಯಮ ಸಂಸ್ಥೆ ಅಭಿವೃದ್ಧಿಪಡಿಸಿದೆ.
ಐಸ್ ಮೀಟ್ ಹೆಸರಿನ ಈ ಐಸ್‌ಕ್ರೀಂನ ವಿಡಿಯೋವೊಂದನ್ನು ಸಂಸ್ಥೆ ಬಿಡುಗಡೆ ಮಾಡಿದ್ದು, ಐಸ್‌ಕ್ರೀಂ ಯಂತ್ರದಿಂದ ಈ ಐಸ್‌ಕ್ರೀಂ ಹೊರಬರುತ್ತಿರುವುದನ್ನು ನೋಡಬಹುದಾಗಿದೆ.