ಅಮೆರಿಕದಲ್ಲಿ ಈಗ ವರ್ಣಭೇದ ನೀತಿ ವಿರುದ್ಧ ದೊಡ್ಡ ಹೋರಾಟ ನಡೆಯುತ್ತಿದೆ. ಈ ಸಂದರ್ಭದಲ್ಲಿ ಜಾರ್ಜ್ ಫ್ಲಾಯ್ಡ್ ಸಾವನ್ನು ಪ್ರತಿಭಟಿಸಿ ಮಹಿಳೆಯೊಬ್ಬರು ‘ನನಗೆ ಉಸಿರಾಡಲು ಸಾಧ್ಯವಿಲ್ಲ’ ಎಂಬ ಪ್ಲೇ ಕಾರ್ಡ್ ಹಿಡಿದು ಒಬ್ಬಂಟಿಯಾಗಿ ಮೆರವಣಿಗೆ ನಡೆಸಿದ್ದಾರೆ.
ತನ್ನ ಪ್ರತಿಭಟನೆಗೆ ಸ್ನೇಹಿತರ್ಯಾರೂ ಜೊತೆಗೆ ಸೇರದ ಕಾರಣ ಆಕೆ ಒಬ್ಬಂಟಿಯಾಗಿ ರಸ್ತೆಯಲ್ಲಿ ಸಾಗಿದ್ದಾರೆ. ಇದರ ಪೋಟೋವನ್ನು ಆಕೆಯ ಪುತ್ರ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಒಬ್ಬಂಟಿ ಹೋರಾಟಕ್ಕೆ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ.
ಅಮೆರಿಕದ ಧ್ವಜ ಮತ್ತು ರೂಸ್ಟರನ್ನು ಸಣ್ಣ ಬಂಡಿಯಲ್ಲಿ ಅರ್ಧ ಕಿಲೋಮೀಟರ್ ಎಳೆದೊಯ್ದು ಅವರು ಗಮನ ಸೆಳೆದಿದ್ದಾರೆ. ನೆಟ್ಟಿಗರು ಆಕೆಯನ್ನು ಬೆಂಬಲಿಸಿ ಪ್ರತಿಕ್ರಿಯೆ ನೀಡಿದ್ದಾರೆ.
https://twitter.com/baddiejezzy/status/1267968516415782914?ref_src=twsrc%5Etfw%7Ctwcamp%5Etweetembed%7Ctwterm%5E1267968516415782914&ref_url=https%3A%2F%2Fwww.timesnownews.com%2Fthe-buzz%2Farticle%2Fi-cant-breathe-us-woman-carries-out-solo-march-over-george-floyds-death-wins-praise-online%2F601748