ಕಳೆದ ವರ್ಷ ದೀರ್ಘ ಕಾಲದ ಲಾಕ್ಡೌನ್ ಹಾಗೂ ಬಿಗಿ ಕ್ವಾರಂಟೈನ್ ನಿಯಮಗಳಿಂದಾಗಿ ಅನೇಕರು ಹೆಚ್ಚು ಕಾಲ ಮನೆಯ ಒಳಗಡೆಯೇ ಇರಬೇಕಾದ್ದರಿಂದ ಅನೇಕರ ಮಾನಸಿಕ ಆರೋಗ್ಯ ಹದಗೆಟ್ಟಿದೆ.
ಲಾಕ್ಡೌನ್ನಿಂದಾಗಿ ಅನೇಕರ ಮಾನಸಿಕ ಆರೋಗ್ಯ ಹದಗೆಟ್ಟಿದ್ದರೆ ಇನ್ನು ಹಲವು ಕಡೆ ದೌರ್ಜನ್ಯ ಹೆಚ್ಚಾಗಿದೆ. ಕಳೆದ ವರ್ಷ ಗೂಗಲ್ನಲ್ಲಿ ಗೃಹ ಹಿಂಸಾಚಾರದ ಹೆಚ್ಚಿನ ಸಂಶೋಧನೆಯನ್ನ ಮಾಡಲಾಗಿದೆ. ಗೂಗಲ್ನಲ್ಲಿ ಕೆಲ ಭಯಾನಕ ಪ್ರಶ್ನೆಗಳಿಗೆ ಹೆಚ್ಚಿನ ಸರ್ಚ್ ಮಾಡಲಾಗಿದೆ.
ನ್ಯೂಜಿಲೆಂಡ್ನ ಒಟಾಗೊ ವಿಶ್ವವಿದ್ಯಾಲಯದ ರಾಷ್ಟ್ರೀಯ ಶಾಂತಿ ಹಾಗೂ ಸಂಘರ್ಷ ಅಧ್ಯಯನ ಕೇಂದ್ರದ ಉಪ ನಿರ್ದೇಶಕಿ ಹಾಗೂ ಹಿರಿಯ ಉಪನ್ಯಾಸಕಿ ಕಟರೀನಾ ಸ್ಪ್ಯಾಂಡಿಶ್ ಈ ಸಂಬಂಧ ಸಂಶೋಧನೆ ನಡೆಸಿದ್ದಾರೆ.
‘ಕೊರೊನಾ’ ಸಂದರ್ಭದಲ್ಲಿ ಆಹಾರ ಸೇವನೆ ಬಗ್ಗೆ WHO ಹೇಳೋದೇನು….?
ಈ ಸಂಶೋಧನೆಯಲ್ಲಿ ನಿಮ್ಮ ಮಹಿಳೆಯರನ್ನ ಕಂಟ್ರೋಲ್ ಮಾಡೋದು ಎಂಬ ವಿಚಾರದ ಬಗ್ಗೆ ಗೂಗಲ್ನಲ್ಲಿ 165 ಮಿಲಿಯನ್ ಬಾರಿ ಸರ್ಚ್ ಮಾಡಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಇದು ಮಾತ್ರವಲ್ಲದೇ ಯಾರಿಗೂ ತಿಳಿಯದಂತೆ ಮಹಿಳೆಯ ಮೇಲೆ ಹಲ್ಲೆ ನಡೆಸೋದು ಹೇಗೆ ಎಂಬ ವಿಚಾರವನ್ನೂ 165 ಮಿಲಿಯನ್ ಬಾರಿ ಹುಡುಕಾಟ ನಡೆಸಲಾಗಿದೆ. ಇದಕ್ಕೂ ಭಯಾನಕ ಎಂಬಂತೆ ಆಕೆ ಮನೆಗೆ ಬರುತ್ತಿದ್ದಂತೆಯೇ ಆಕೆಯನ್ನ ಕೊಲೆ ಮಾಡುತ್ತೇನೆ ಎಂಬ ವಿಚಾರವನ್ನ 178 ಮಿಲಿಯನ್ ಬಾರಿ ಸರ್ಚ್ ಮಾಡಲಾಗಿದೆ.
ಇದು ಮಾತ್ರವಲ್ಲದೇ ಆತ ನನ್ನನ್ನ ಕೊಲೆ ಮಾಡುತ್ತಾನೆ ಎಂಬ ವಿಚಾರವನ್ನ 107 ಮಿಲಿಯನ್ ಬಾರಿ ಹಾಗೂ ಅವನು ನನಗೆ ಯಾವಾಗಲೂ ಹೊಡೆಯುತ್ತಾನೆ ಎಂಬ ವಿಚಾರವನ್ನ 320 ಮಿಲಿಯನ್ ಬಾರಿ ಹುಡುಕಾಟ ನಡೆಸಲಾಗಿದೆ.
ಇದೆಲ್ಲಕ್ಕಿಂತ ಹೆಚ್ಚು ಅಂದರೆ 1.22 ಬಿಲಿಯನ್ ಬಾರಿಗೆ ಆತ ನನ್ನನ್ನ ಬಿಡುತ್ತಿಲ್ಲ. ದಯಮಾಡಿ ಸಹಾಯ ಮಾಡಿ ಎಂದು ಹುಡುಕಾಟ ನಡೆಸಲಾಗಿದೆ.