alex Certify ಗರ್ಭಿಣಿ ಪತ್ನಿ ಜೊತೆ ಸೆಲ್ಫಿ ತೆಗೆದ ಪತಿ 1000 ಅಡಿ ಕೆಳಗೆ ತಳ್ಳಿದ್ದ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿ ಪತ್ನಿ ಜೊತೆ ಸೆಲ್ಫಿ ತೆಗೆದ ಪತಿ 1000 ಅಡಿ ಕೆಳಗೆ ತಳ್ಳಿದ್ದ….!

Husband Takes Romantic Selfie With Pregnant Wife, Then Pushes Her Off 1000-Ft Cliff to Her Death

ಟರ್ಕಿಯಲ್ಲಿ ವ್ಯಕ್ತಿಯೊಬ್ಬ ಗರ್ಭಿಣಿ ಪತ್ನಿ ಜೊತೆ ರೋಮ್ಯಾಂಟಿಕ್ ಸೆಲ್ಫಿ ತೆಗೆದುಕೊಂಡ ನಂತ್ರ 1000 ಅಡಿ ಎತ್ತರದಿಂದ ಕೆಳಗೆ ತಳ್ಳಿದ್ದಾನೆ. ಘಟನೆ 2018ರಲ್ಲಿ ನಡೆದಿದೆ. ಆದ್ರೆ 2020ರಲ್ಲಿ ಇದು ಕೊಲೆ ಎಂಬುದು ಗೊತ್ತಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈಗ ಇಬ್ಬರ ಸೆಲ್ಫಿ ಫೋಟೋ ಬಹಿರಂಗಗೊಂಡಿದೆ.

40 ವರ್ಷದ ಹಕನ್ ಐಸಲ್, 32 ವರ್ಷದ ಸೆಮ್ರಾ ಐಸಲ್ ಳನ್ನು ಆಗ್ನೇಯ ಟರ್ಕಿಶ್ ನಗರವಾದ ಮುಗ್ಲಾದ ಫೆಥಿಯೆ ಜಿಲ್ಲೆಯ ಬಟರ್ಫ್ಲೈ ಕಣಿವೆಗೆ ರಜೆ ಕಳೆಯಲು ಹೋಗಿದ್ದರು. ಈ ವೇಳೆ ಸೆಲ್ಫಿ ತೆಗೆದ ಪತಿ ನಂತ್ರ ಪತ್ನಿಯನ್ನು ಕೆಳಗೆ ತಳ್ಳಿದ್ದ. ಘಟನೆ ಜೂನ್ 2018 ರಲ್ಲಿ ನಡೆದಿತ್ತು. ತನಿಖೆ ವೇಳೆ ಹಕನ್ ಐಸಲ್, ಪತ್ನಿ ವಿಮೆ ಹಣ ತೆಗೆದುಕೊಳ್ಳಲು ಕೊಲೆ ಮಾಡಿದ್ದ ಎನ್ನಲಾಗಿದೆ. ಪತ್ನಿ ಕೊಲೆ ಮಾಡಿದ ನಂತ್ರ ವೈಯಕ್ತಿಕ ಅಪಘಾತ ವಿಮೆಯಾಗಿ 400,000 ಟರ್ಕಿ ಲಿರಾ ತೆಗೆದುಕೊಳ್ಳಲು ಮುಂದಾಗಿದ್ದ. ಇದಕ್ಕಾಗಿ ವಿಮೆ ಕಂಪನಿಗೆ ಹೋಗಿದ್ದ. ಆದ್ರೆ ಇದು ಪೂರ್ವನಿಯೋಜಿತ ಕೊಲೆ ಎಂದು ಪೊಲೀಸರು ಆತನನ್ನು ಬಂಧಿಸಿದ್ದರು.

ಮಲಗಿದ್ದ ಜಾಗದಲ್ಲೇ ಕೇವಲ 8 ಗಂಟೆ ಅವಧಿಯಲ್ಲಿ 11 ಲಕ್ಷ ರೂ. ಗಳಿಕೆ….!

7 ತಿಂಗಳ ಗರ್ಭಿಣಿ ತಳ್ಳಿ ಹತ್ಯೆ ಮಾಡಿರುವ ಹಕಲ್ ಮಾತ್ರ ಆರೋಪ ತಳ್ಳಿ ಹಾಕಿದ್ದಾನೆ. ನಾನು ಹತ್ಯೆ ಮಾಡಿಲ್ಲ. ಸೆಲ್ಫಿ ತೆಗೆದ ನಂತ್ರ ಪತ್ನಿ ತನ್ನ ಫೋನ್ ಕೇಳಿದ್ದಳು. ಅದು ಬ್ಯಾಗ್ ನಲ್ಲಿದ್ದ ಕಾರಣ ತರಲು ಹೋಗಿದ್ದ. ಆದ್ರೆ ಹಿಂದೆ ಕಿರುಚಿದ ಧ್ವನಿ ಕೇಳಿಸಿತು. ತಿರುಗಿ ನೋಡಿದ್ರೆ ಹೆಂಡತಿ ಇರಲಿಲ್ಲ ಎಂದಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...