alex Certify ಬೆಚ್ಚಿಬೀಳಿಸುವಂತಿದೆ ʼಕೊರೊನಾʼ ಸಂದರ್ಭದಲ್ಲಿ ಬಹಿರಂಗವಾಗಿರುವ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ʼಕೊರೊನಾʼ ಸಂದರ್ಭದಲ್ಲಿ ಬಹಿರಂಗವಾಗಿರುವ ಈ ವಿಡಿಯೋ

ಹೊಸದಾಗಿ ತೆರೆದ ಡಿಪಾರ್ಟ್‌ಮೆಂಟಲ್ ಸ್ಟೋರ್‌ ಒಂದಕ್ಕೆ ಒಮ್ಮೆಲೇ ನೂರಾರು ಶಾಪರ್‌ಗಳು ದಾಂಗುಡಿ ಇಟ್ಟ ಕಾರಣ ಕೋವಿಡ್-19 ಸೋಂಕು ತಗುಲುವ ಭೀತಿಯಿಂದ ಆ ಸ್ಟೋರ್ ‌ಅನ್ನೇ ಮುಚ್ಚಬೇಕಾದ ಪರಿಸ್ಥಿತಿ ಬ್ರೆಜಿಲ್‌ನಲ್ಲಿ ಉದ್ಭವಿಸಿದೆ.

ಬ್ರೆಜಿಲ್‌ನ ಬೆಲೆಮ್ ನಗರದಲ್ಲಿರುವ ಈ ಸ್ಟೋರ್‌ನಲ್ಲಿ ಭಾರೀ ಪ್ರಮಾಣದಲ್ಲಿ ಜನರು ಸೇರಿದ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಕ್ಟೋಬರ್‌ 10ರಂದು ಈ ಘಟನೆ ಸಂಭವಿಸಿದೆ.

ಈ ವಿಡಿಯೋಗಳು ವೈರಲ್ ಆದ ಬಳಿಕ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಪಾಲನೆ ಮಾಡದೇ ಇದ್ದ ಕಾರಣ, ಸ್ಟೋರ್ ‌ಅನ್ನು ಮುಚ್ಚಲು ಅಲ್ಲಿನ ಪ್ರಾಂತೀಯ ಸರ್ಕಾರ ಸ್ಟೋರ್‌ಗೆ ಆದೇಶ ಹೊರಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...