ಮೊಸಳೆಗಳಿಂದ ತುಂಬಿದ್ದ ನದಿಯೊಂದರಲ್ಲಿ ಕಳೆದುಹೋಗಿದ್ದ ತಿಮಿಂಗಿಲವೊಂದು, 17 ದಿನಗಳ ಬಳಿಕ ಮತ್ತೆ ಸಮುದ್ರ ಸೇರಿಕೊಂಡ ಘಟನೆ ಆಸ್ಟ್ರೇಲಿಯಾದಲ್ಲಿ ಜರುಗಿದೆ.
ಇಲ್ಲಿನ ಕಾಕಡು ರಾಷ್ಟ್ರೀಯ ಉದ್ಯಾನದಲ್ಲಿ ಮೂರು ತಿಮಿಂಗಿಲಗಳು ಈಸ್ಟ್ ಅಲಿಗೇಟರ್ ನದಿಯೊಳಗೆ ಪ್ರವೇಶಿಸಿದ್ದವು. ಇವುಗಳನ್ನು ಕಳೆದ ಮಂಗಳವಾರದಂದು ಪತ್ತೆ ಮಾಡಲಾಗಿತ್ತು. ಮೂರರ ಪೈಕಿ ಎರಡು ತಿಮಿಂಗಿಲಗಳು ಬೇಗನೇ ಸಮುದ್ರಕ್ಕೆ ಮರಳಿವೆ. ಆದರೆ ತಾನು ಬಂದ ಹಾದಿಯನ್ನು ಮರೆತ ಮೂರನೇ ತಿಮಿಂಗಿಲ ನದಿಯಲ್ಲೇ ಸೇರಿಕೊಂಡುಬಿಟ್ಟಿದೆ. ಈ ನದಿಯಲ್ಲಿ ಮೊಸಳೆಗಳ ಜೊತೆಗೆ ಆಗಾಗ ಚಲಿಸುವ ದೋಣಿಗಳೂ ಸಹ ತಿಮಿಂಗಿಲಕ್ಕೆ ಅಪಾಯವಾಗಬಹುದಾಗಿತ್ತು. ಹಂಪ್‌ಬ್ಯಾಕ್ ಜಾತಿಯ ಈ ತಿಮಿಂಗಿಲಗಳು ಬೇಸಿಗೆ ಸಮಯದಲ್ಲಿ ಅಂಟಾರ್ಕ್ಟಿಕ್ ಪ್ರದೇಶದಲ್ಲಿ ಕಾಲ ಕಳೆಯುತ್ತವೆ. ಮರಿಗಳಿಗೆ ಜನ್ಮ ನೀಡಲು ಸಮಶೀತೋಷ್ಣ ಪ್ರದೇಶದ ನೀರಿಗೆ ಬರುತ್ತವೆ ಈ ತಿಮಿಂಗಿಲಗಳು.
https://www.facebook.com/KakaduNationalPark/posts/2078254402309088