
ರೆಡ್ಡಿಟ್ ಬಳಕೆದಾರರ ಗುಂಪೊಂದು ಭಾರೀ ಗಾತ್ರದ ಸೂರ್ಯಕಾಂತಿ ಗಿಡವೊಂದರ ಚಿತ್ರವನ್ನು ಹಂಚಿಕೊಂಡಿದ್ದಾರೆ.
propmomma ಹೆಸರಿನ ರೆಡ್ಡಿಟ್ ಬಳಕೆದಾರರೊಬ್ಬರು ಸೂರ್ಯಕಾಂತಿ ಗಿಡದ ಪಕ್ಕ ನಿಂತುಕೊಂಡು ತೆಗೆಸಿಕೊಂಡಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಗಿಡ ಎಷ್ಟು ಉದ್ದ ಇದೆ ಎಂದರೆ, ಚಿತ್ರದಲ್ಲಿರುವ ಮಹಿಳೆಯ ತಲೆಯ ಮೇಲೆ ಇರುವ ಶವರ್ನಂತೆ ಕಾಣುತ್ತಿದೆ.
ಈ ಚಿತ್ರಕ್ಕೆ ಪ್ರತಿಕ್ರಿಯಿಸುತ್ತಿರುವ ಇತರ ನೆಟ್ಟಿಗರು ತಾವೂ ಸಹ ಇದೇ ರೀತಿಯ ದೊಡ್ಡ ಸೂರ್ಯಕಾಂತಿ ಗಿಡಗಳ ನಡುವೆ ನಿಂತುಕೊಂಡು ತೆಗೆಸಿಕೊಂಡ ಫೋಟೋಗಳನ್ನು ಕಾಮೆಂಟ್ ಸೆಕ್ಷನ್ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.