ಮನುಷ್ಯರ ರೀತಿಯಲ್ಲಿ ಇತರೆ ಪ್ರಾಣಿ ಪಕ್ಷಿಗಳಿಗೆ ಬಣ್ಣ ಕಾಣುವುದೋ ಇಲ್ಲವೋ ಎನ್ನುವ ಚರ್ಚೆಗಳು ದಶಕಗಳಿಂದ ನಡೆಯುತ್ತಲೇ ಇದೆ. ಆದರೀಗ ಹೊಸ ಸಂಶೋಧನೆಯ ಪ್ರಕಾರ ಮನುಷ್ಯರಿಗೆ ಕಾಣದ ಬಣ್ಣಗಳೂ ಹಮ್ಮಿಂಗ್ ಬರ್ಡ್‌ಗಳಿಗೆ ಕಾಣುತ್ತವೆ ಎನ್ನಲಾಗಿದೆ.
ಸಂಶೋಧನೆಯೊಂದರ ಪ್ರಕಾರ ಹಮ್ಮಿಂಗ್ ಬರ್ಡ್ ಪಕ್ಷಿಗಳ ಕಣ್ಣಿಗೆ ಮನುಷ್ಯರಿಗೆ ಕಾಣದ ಬಣ್ಣಗಳು ಕಾಣುತ್ತವೆ ಅಂತೆ. ಅದರಿಂದಲೇ ಆ ಹಕ್ಕಿಗಳು ಆಹಾರ ಹಾಗೂ ಇನ್ನಿತರೆ ಕಾರ್ಯವನ್ನು ಸರಾಗವಾಗಿ ಮಾಡಿಕೊಳ್ಳುತ್ತವೆ.
ಮನುಷ್ಯರು ಕೇವಲ ಸ್ಪೆಕ್ಟ್ರಂ ನಲ್ಲಿರುವ ಬಣ್ಣಗಳನ್ನು ಮಾತ್ರ ಗುರುತಿಸಬಲ್ಲರು. ಆದರೆ ಹಮ್ಮಿಂಗ್ ಬರ್ಡ್ ನಾನ್ ಸ್ಪೆಕ್ಟ್ರಂ ಬಣ್ಣಗಳನ್ನು ಗುರುತಿಸುತ್ತವೆ ಅಂತೆ. ಇದರಿಂದ ಮನುಷ್ಯರಿಗೆ ಕಾಣದ ಇತರೆ ಬಣ್ಣಗಳನ್ನು ಗುರುತಿಸುತ್ತವೆ ಅಂತೆ. ಇದಕ್ಕೆ ಪ್ರಮುಖವಾಗಿ ಹಮ್ಮಿಂಗ್ ಬರ್ಡ್‌ಗಳಿಗೆ ನಾಲ್ಕನೇ ಆಯಾಮ ಇರುವುದೇ ಕಾರಣ ಎನ್ನಲಾಗಿದೆ.
ಈ ಬಗ್ಗೆ ಸಂಶೋಧನೆಯನ್ನು ಕೊಲೊರಾಡೋದ ರಾಕಿ ಮೌಂಟೇನ್ ಬಟಾನಿಕಲ್ ಲ್ಯಾಬ್‌ನಲ್ಲಿ ಮಾಡಲಾಗಿದೆ. ಸಂಶೋಧನೆಯ ಪ್ರಕಾರ ತಮ್ಮ ಸಂಗಾತಿಗಳನ್ನು ಗುರುತಿಸುತ್ತವೆ ಎನ್ನಲಾಗಿದೆ. ಹಮ್ಮಿಂಗ್ ಬರ್ಡ್ ರೀತಿಯಲ್ಲಿಯೇ ಅನೇಕ ಪ್ರಾಣಿ, ಪಕ್ಷಿಗಳಿಗೆ ನಮ್ಮ ಕಣ್ಣಿಗೆ ಕಾಣದ ಕೆಲವೊಂದು ಬಣ್ಣಗಳು ಕಾಣುತ್ತವೆ. ಇನ್ನು ಕೆಲವು ಪ್ರಾಣಿಗಳಿಗೆ ಯಾವುದೇ ರೀತಿಯ ಬಣ್ಣ ಗುರುತಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ಸಾಬೀತಾಗಿದೆ.