ಮನುಷ್ಯ ಹಾಗೂ ಪ್ರಾಣಿಗಳ ನಡುವೆ ಅವಿನಾಭಾವ ಸಂಬಂಧ ಇದ್ದೇ ಇದೆ. ಹಲವು ಪ್ರಾಣಿಗಳು ಮನುಷ್ಯರ ಚಲನವಲನವನ್ನು ಗ್ರಹಿಸಿ ಪ್ರತಿಕ್ರಿಯಿಸುವ ಪರಿಪಾಠ ಬೆಳೆದು ಬಂದಿದೆ. ಇದೀಗ ನಡೆದಿರುವ ಹೊಸ ಸಂಶೋಧನೆಯ ಪ್ರಕಾರ ಚಿಂಪಾಂಜಿಯ ಭಾವನೆಯನ್ನು ಮನುಷ್ಯರು ಅರ್ಥ ಮಾಡಿಕೊಳ್ಳಬಹುದು.
ಚಿಂಪಾಂಜಿ ಖುಷಿ, ಸಿಟ್ಟು, ಬೇಸರ ಅಥವಾ ಭೀತಿಯಲ್ಲಿರುವುದನ್ನು ಅದರ ಕೂಗಿನಿಂದ ಮನುಷ್ಯ ಅರ್ಥೈಸಬಹುದು ಎಂದು ಸಂಶೋಧಕರು ಹೇಳಿದ್ದಾರೆ.
ಆಮ್ಸ್ಟರ್ ಡ್ಯಾಮ್ ವಿಶ್ವ ವಿದ್ಯಾಲಯದ ಸಂಶೋಧಕ ರೋಜಾ ಕಮಿಲೊಗ್ಲು ತಿಳಿಸಿರುವಂತೆ, ಮಾನವರು ಇತರ ಪ್ರಾಣಿಗಳ ಧ್ವನಿಯನ್ನು ನಿರ್ದಿಷ್ಟ ನಡವಳಿಕೆಯ ಸಂದರ್ಭಗಳಲ್ಲಿ ನಿಖರವಾಗಿ ಗುರುತು ಹಿಡಿಯುವುದನ್ನು ನಾವು ಮೊದಲ ಬಾರಿಗೆ ದಾಖಲಿಸಿ ಪ್ರಸ್ತುತ ಪಡಿಸುತ್ತಿದ್ದೇವೆ ಎಂದಿದ್ದಾರೆ.
ಚಿಂಪಾಂಜಿಯ 150 ಬಗೆಯ ಶಬ್ದಗಳನ್ನು 3500 ಮಂದಿಗೆ ಕೇಳಿಸಿ, ಆ ಶಬ್ದ ಖುಷಿಯೋ, ಬೇಸರವೋ, ಅಪಾಯದ ಸಂಕೇತವೋ ಎಂದು ಉತ್ತರ ಪಡೆದು ದಾಖಲಿಸಿ ಅಧ್ಯಯನ ಮಾಡಲಾಗಿದೆ.