ಓಕಿನಾವಾ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಟೆಕ್ನಾಲಜಿ ಗ್ರಾಜುಯೇಟ್ ಯೂನಿವರ್ಸಿಟಿ ಹಾಗೂ ಆಸ್ಟ್ರೇಲಿಯಾದ ನ್ಯಾಷನಲ್ ಯೂನಿವರ್ಸಿಟಿ ವಿಜ್ಞಾನಿಗಳು ನಡೆಸಿದ ಹೊಸ ಅಧ್ಯಯನದಲ್ಲಿ ಮನುಷ್ಯನ ಲಾಲಾರಸದ ಕುರಿತಾದ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಮುಂದಿನ ದಿನಗಳಲ್ಲಿ ಮನುಷ್ಯನ ಲಾಲಾರಸ ಹಾವುಗಳ ಲಾಲಾರಸದಂತೆಯೇ ವಿಷಕಾರಿ ಆಗಲಿದೆ ಎಂದು ಈ ಅಧ್ಯಯನ ಹೇಳಿದೆ.
ಎರಡೂ ವಿಶ್ವವಿದ್ಯಾಲಯದ ಸಂಶೋಧಕರು ಮಾನವನ ಎಂಜಲಿನಲ್ಲಿಯೂ ಹಾವಿನ ಎಂಜಲಿನಲ್ಲಿರುವ ವಿಷಕಾರಿ ಅಂಶವನ್ನ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಮನುಷ್ಯ ಹಾಗೂ ಹಾವಿನಲ್ಲಿರುವ ವಿಷ ಗ್ರಂಥಿಗಳ ನಡುವಿನ ಸಾಮ್ಯತೆಯನ್ನ ಕಂಡು ಹಿಡಿದಿದೆ.
ಲಾಲಾರಸದಲ್ಲಿ ವಿಷ ಉತ್ಪತ್ತಿ ಆಗಲು ಅಗತ್ಯವಾದ ಅನುವಂಶಿಕ ಅಡಿಪಾಯವು ಹಾವಿನಂತೆಯೇ ಮನುಷ್ಯರಲ್ಲೂ ಇದೆ ಎಂದು ಈ ಅಧ್ಯಯನ ಹೇಳಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮನುಷ್ಯ ಕೂಡ ಹಾವಿನಂತೆಯೇ ವಿಷಕಾರಿಯಾಗಬಹುದು ಎಂದು ಮುನ್ಸೂಚನೆ ನೀಡಿದೆ.