alex Certify ಮಧ್ಯಕಾಲೀನ ಯುಗದ ಮಾನವ ದೇಹದ ಪಳೆಯುಳಿಕೆ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಧ್ಯಕಾಲೀನ ಯುಗದ ಮಾನವ ದೇಹದ ಪಳೆಯುಳಿಕೆ ಪತ್ತೆ

ಏಳು ನೂರು ವರ್ಷಗಳಿಗಿಂತ ಹಳೆಯದಾದ ಮಾನವನ ದೇಹದ ಅವಶೇಷಗಳನ್ನು ಎಡಿನ್‌ಬರ್ಗ್‌ನ ಚರ್ಚ್‌ವೊಂದರ ಹೊರಗೆ ಹೊರತೆಗೆಯಲಾಗಿದೆ. 14ನೇ ಶತಮಾನಕ್ಕೆ ಈ ಪಳೆಯುಳಿಕೆಗಳು ಸೇರಿವೆ ಎನ್ನಲಾಗಿದೆ.

ಈ ಸ್ಥಳದಲ್ಲಿ ಸ್ಮಶಾನವೊಂದು ಇತ್ತು ಎಂದು ಪ್ರಾಚ್ಯ ವಸ್ತು ಸರ್ವೇ ಒಂದರಿಂದ ತಿಳಿದುಬಂದಿತ್ತು. ಇಲ್ಲಿ ಸಿಕ್ಕ ಮಾನವರ ಪಳೆಯುಳಿಕೆಗಳು 1300-1650ರ ನಡುವಿನ ಕಾಲಘಟ್ಟಕ್ಕೆ ಸೇರಿದವು ಎಂದು ತಿಳಿದುಬಂದಿದೆ. ಆ ಕಾಲದಲ್ಲಿ ಇದ್ದ ಮಾನವರ ಆರೋಗ್ಯ ಹೇಗಿತ್ತು ಎಂದು ತಿಳಿಯಲು ಈ ಪಳೆಯುಳಿಕೆಗಳ ಅಧ್ಯಯನ ಮಾಡಲಾಗುವುದು.

ಈ ಸ್ಥಳದಲ್ಲಿ ಇನ್ನಷ್ಟು ಪಳೆಯುಳಿಕೆಗಳಿಗೆ ಶೋಧ ನಡೆಯುತ್ತಿದ್ದು, ಮತ್ತೇನಾದರೂ ಕುತೂಹಲಕಾರಿ ಸಂಗತಿಗಳು ಸಿಗುವ ಸಾಧ್ಯತೆ ಇದೆ ಎಂದು ಪ್ರಾಚ್ಯ ವಸ್ತು ಇಲಾಖೆಯ ಸಿಬ್ಬಂದಿ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...