ಚರ್ಮವ್ಯಾಧಿಯಿಂದ ಬಳಲುತ್ತಿದ್ದ ಯುವತಿಯೊಬ್ಬಳು, ಅದನ್ನೇ ಬಳಸಿಕೊಂಡು ಮೈತುಂಬಾ ಕಲೆಯರಳಿಸಿದ್ದಾಳೆ.
ಡೆನ್ಮಾರ್ಕ್‌ನ ಎಮ್ಮ ಆಲ್ಡೆನ್ರಿಡ್ ಎಂಬಾಕೆಗೆ ಡರ್ಮಟೋಗ್ರಾಪಿಯಾ ಎಂಬ ಚರ್ಮವ್ಯಾಧಿ ಇತ್ತು. ಅಂದರೆ, ತನಗೇ ಗೊತ್ತಿಲ್ಲದಂತೆ ಚರ್ಮದ ಮೇಲೆ ಏನಾದರೊಂದು ಗೀಚಿಕೊಳ್ಳುತ್ತಾ ಇರುವುದು.
ಇದನ್ನು ಗಮನಿಸಿದ ಸಂಬಂಧಿಕರು ಆಗಾಗ ಆಕೆಯ ಚರ್ಮ ಊದಿಕೊಂಡಿರುವುದು, ಗೆರೆಗಳು ಎದ್ದಿರುವುದನ್ನು ಪ್ರಶ್ನಿಸಿದರು. ಆಕೆಗೆ ಈ ಬಗ್ಗೆ ತಿಳಿಸಿ ಹೇಳಿದರು.
ಕೊನೆಗೆ ಇದೊಂದು ಖಾಯಿಲೆ ಎಂಬುದು ಗೊತ್ತಾಗಿ ಕೊರಗದೆ ಖುಷಿಪಟ್ಟ ಎಮ್ಮಾ, ಚರ್ಮದ ಮೇಲೆ ಏನೇನೋ ಗೀಚಿಕೊಳ್ಳುವ ಬದಲು, ಮನಸ್ಸು ಅತ್ತ ವಾಲಿದ ಕೂಡಲೇ ಪ್ರಜ್ಞಾಪೂರ್ವಕವಾಗಿ ಚಿತ್ತಾರ ಮೂಡಿಸಲು ಶುರು ಮಾಡಿದಳು.
ಚರ್ಮದ ಮೇಲೇನೋ ಚಿತ್ತಾರ ಮೂಡಿರುವುದನ್ನು ಕಂಡು ಜನರೂ ಮೆಚ್ಚುತ್ತಿದ್ದಾರೆ. ನನಗೂ ಇದರಿಂದ ಭಾರೀ ನೋವಾಗಲೀ, ಜೀವಹಾನಿ ಆಗಲೀ ಇಲ್ಲ ಎನಿಸುತ್ತಿದೆ ಎಂದು ಎಮ್ಮಾ ಸಂತೋಷ ವ್ಯಕ್ತಪಡಿಸುತ್ತಾಳೆ.
https://www.instagram.com/p/BXh42K8BtYu/?utm_source=ig_embed
https://www.instagram.com/p/BXd1kD5B6ye/?utm_source=ig_embed
https://www.instagram.com/p/BhJsTwNhZmZ/?utm_source=ig_embed
https://www.instagram.com/p/BsjZT5qB4_7/?utm_source=ig_embed