ಕೋವಿಡ್-19 ಸಾಂಕ್ರಮಿಕ ರೋಗದ ಕಾರಣ ಜಗತ್ತಿನಾದ್ಯಂತ ಜನರು ತಂತಮ್ಮ ಪ್ರೀತಿ ಪಾತ್ರರನ್ನು ಬಹಳ ದಿನಗಳ ಮಟ್ಟಿಗೆ ನೋಡದೇ ಇರಬೇಕಾದ ಪರಿಸ್ಥಿತಿ ಎಲ್ಲೆಡೆ ನೆಲೆಸಿದೆ. ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಬಲು ಸುಲಭವಾಗಿ ಪಸರಿಸುವ ಕಾರಣದಿಂದಾಗಿ, ಕುಟುಂಬದ ಸದಸ್ಯರು ಪರಸ್ಪರರಿಂದ ಒಂದಷ್ಟು ದಿನಗಳ ಮಟ್ಟಿಗೆ ದೂರ ಉಳಿಯಬೇಕಾದ ಅನಿವಾರ್ಯತೆ ನೆಲೆಸಿದೆ.
ಇಂಥ ಪರಿಸ್ಥಿತಿಯಿಂದ ಜನರಿಗೆ ಒಂದು ರಿಲೀಫ್ ಕೊಡಲು ಬೆಲ್ಜಿಯಂನಲ್ಲಿ ಹೊಸ ಐಡಿಯಾವೊಂದನ್ನು ಮಾಡಲಾಗಿದೆ. ಆಸ್ಪತ್ರೆ ಅಥವಾ ನರ್ಸಿಂಗ್ ಹೋಂಗಳಲ್ಲಿ ಕೆಲಸ ಮಾಡುವ ಮಂದಿಗೆ, ಬಹಳ ದಿನಗಳ ಕಾಲ ಕುಟುಂಬದಿಂದ ದೂರ ಉಳಿದುಕೊಂಡಾಗ ತಮ್ಮ ಮನೆ ಮಂದಿಯ ಬೆಚ್ಚನೆಯ ಅಪ್ಪುಗೆ ಬೇಕಾಗುತ್ತದೆ.
ಇದಕ್ಕೆಂದೇ ಅಲ್ಲಿನ ಆಸ್ಪತ್ರೆಗಳಲ್ಲಿ ಅಪ್ಪುಗೆ ಪರದೆಗಳನ್ನು (hug curtain) ಅಳವಡಿಸಿದ್ದು, ಈ ಪ್ಲಾಸ್ಟಿಕ್ ಬೌಂಡರಿ ಮೂಲಕ ಸೋಂಕು ಹಬ್ಬುವ ರಿಸ್ಕ್‌ನಿಂದ ಮುಕ್ತವಾಗಿ ತಂತಮ್ಮ ಪ್ರೀತಿಪಾತ್ರರನ್ನು ಆಲಿಂಗಿಸಿಕೊಳ್ಳಲು ಜನರಿಗೆ ಅನುವು ಮಾಡಿಕೊಡಲಾಗಿದೆ.