ಕರೊನಾ ವೈರಸ್ ವಿಶ್ವಕ್ಕೆ ತಟ್ಟಿದಾಗಿನಿಂದ ಹೊರಗೆಲ್ಲೂ ಕಾಣಿಸಿಕೊಂಡಿರದ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಇದೇ ಮೊದಲ ಬಾರಿಗೆ ಹೊರಗಡೆ ಕಾಣಿಸಿಕೊಂಡಿದ್ದಾರೆ. ಆದರೆ ಮಾಸ್ಕ್ ಹಾಕದ ಕಾರಣ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕರೊನಾ ಸೋಂಕು ಎದುರಿಸುವಲ್ಲಿ ಪ್ರಮುಖ ಪಾತ್ರ ವಹಿಸಿರೋ ರಕ್ಷಣಾ ವಿಜ್ಞಾನ ಹಾಗೂ ತಂತ್ರಜ್ಞಾನ ಪ್ರಯೋಗಾಲಯಕ್ಕೆ ತಮ್ಮ ಮೊಮ್ಮಗ ವಿಲಿಯಂ ಅವರ ಜೊತೆ ಭೇಟಿ ನೀಡಿದರು. ವಿಶ್ವದ ಅತ್ಯಂತ ಹಳೆಯ ರಾಣಿ ಎನಿಸಿಕೊಂಡಿರೋ ಅವರು ಕರೊನಾ ಸೋಂಕು ಆವರಿಸಿದಾಗಿನಿಂದ ತಮ್ಮೆಲ್ಲ ಅಧಿಕೃತ ಕರ್ತವ್ಯಗಳನ್ನ ಆನ್ಲೈನ್ ಮೂಲಕವೇ ನಿಭಾಯಿಸ್ತಾ ಇದ್ರು. ಕಳೆದ ಏಳು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಎಲೆಜಿಬೆತ್ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಿನ್ಸ್ ವಿಲಿಯಂ ಹಾಗೂ ರಾಣಿ ಎಲೆಜೆಬೆತ್ ಉಳಿದವರಿಂದ ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದರೂ ಸಹ ಯಾರೊಬ್ಬರೂ ಮಾಸ್ಕ್ ಹಾಕಿದ ರೀತಿ ಕಾಣಲಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ರಾಜ ಮನೆತನದ ಫೋಟೋ ವೈರಲ್ ಆಗ್ತಿದೆ……94 ವರ್ಷದ ರಾಣಿ ಈ ರೀತಿ ಮಾಡ್ತಿರೋದು ಸರೀನಾ ಅಂತಾ ಪ್ರಶ್ನೆ ಹಾಕ್ತಿದ್ದಾರೆ.