ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು ಕಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟರ್‌ನಲ್ಲಿ ತಾವು ಪೋಸ್ಟ್ ಮಾಡಿದ ಪೋಸ್ಟ್ ಒಂದರಿಂದ ನೆಟ್ಟಿಗರಿಂದ ಅಪಹಾಸ್ಯಕ್ಕೆ ತುತ್ತಾಗಿದ್ದಾರೆ.
ಶ್ವೇತ ಭವನದಿಂದ ಆರಂಭವಾಗುವಂತೆ ಕಾಣುವ ಈ ವಿಡಿಯೋದಲ್ಲಿ ಟ್ರಂಪ್‌ರ ಟಿಪಿಕಲ್ ಡೈಲಾಗ್‌ಗಳಾದ ಉದ್ಯೋಗ ಸೃಷ್ಟಿ ಹಾಗೂ ಮಿಲಿಟರಿ ಪರ ಮಾತುಗಳು, ’ಅಮೆರಿಕದ ಪರವಾಗಿ ಟ್ರಂಪ್ ಯಾವಾಗಲೂ ನಿಲ್ಲುತ್ತಾರೆ’ ಎಂಬ ಘೋಷ ವಾಕ್ಯಗಳ ಹಿನ್ನೆಲೆಯಲ್ಲಿ ಮೂಡಿ ಬಂದಂತೆ ಕಾಣುತ್ತಿವೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆಗೆ ಟ್ರಂಪ್ ಇರುವ ಚಿತ್ರವೊಂದನ್ನು ವಿಡಿಯೋ ಹೊಂದಿದ್ದು, ಅದರ ಮೇಲೆ ನೊಬೆಲ್ ಪ್ರಶಸ್ತಿ ಇರುವ ಲೋಗೋ ಸಹ ಕಂಡು ಬಂದಿದೆ.
ನಾರ್ವೆಯ ರಾಜಕಾರಣಿಯೊಬ್ಬರ ಮೂಲಕ 2021ರ ನೊಬೆಲ್ ಶಾಂತಿ ಪಾರಿತೋಷಕಕ್ಕೆ ಟ್ರಂಪ್‌ರನ್ನು ನೇಮಕ ಮಾಡುವ ಪ್ರಯತ್ನದ ಭಾಗ ಈ ವಿಡಿಯೋ ಆಗಿದೆ ಎನ್ನಲಾಗಿದೆ. ಇಸ್ರೇಲ್ ಹಾಗೂ ಯುಎಇಗಳ ನಡುವಿನ ಸಂಬಂಧವನ್ನು ಮರಳಿ ಹಾದಿಗೆ ತರಲು ಕಳೆದ ಸೆಪ್ಟೆಂಬರ್‌ನಲ್ಲಿ ಟ್ರಂಪ್ ಯತ್ನಿಸಿದ್ದ ಕಾರಣಕ್ಕೆ ಅವರ ಹೆಸರನ್ನು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಶಿಫಾರಸು ಮಾಡಲಾಗಿದೆ.
https://twitter.com/realDonaldTrump/status/1343673164270858241?ref_src=twsrc%5Etfw%7Ctwcamp%5Etweetembed%7Ctwterm%5E1343673164270858241%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fus-president-donald-trump-campaign-video-after-election-nobel-prize-7124998%2F
https://twitter.com/egheitasean/status/1343680944771743744?ref_src=twsrc%5Etfw%7Ctwcamp%5Etweetembed%7Ctwterm%5E1343680944771743744%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fus-president-donald-trump-campaign-video-after-election-nobel-prize-7124998%2F