
ನಮ್ಮ ಮೆದುಳಿನ ಗ್ರಹಿಕೆಗೆ ದೊಡ್ಡ ಸವಾಲೆಸೆಯುವ ದೃಷ್ಟಿ ಭ್ರಮಣೆಯ ಚಿತ್ರಗಳನ್ನು ಬಹಳಷ್ಟು ಬಾರಿ ನೋಡುತ್ತಲೇ ಇರುತ್ತೇವೆ. ಈ ಚಿತ್ರಗಳು ನಿಮ್ಮನ್ನು ಒಮ್ಮೊಮ್ಮೆ ಬಲು ಗೊಂದಲಕ್ಕೆ ದೂಡಬಲ್ಲವು.
ಈ ಚಿತ್ರಗಳು ನೋಡಲು ಬಹಳ ಸಿಂಪಲ್ ಅನಿಸಿದರೂ ಅರ್ಥ ಮಾಡಿಕೊಳ್ಳುವುದು ಕಷ್ಟ.
’ದಿ ರಿಯಲ್ ಥಿಂಗ್’ ಹೆಸರಿನ ಈ ಚಿತ್ರವು ಇಂಥದ್ದೇ ಒಂದು ದೃಷ್ಟಿ ಭ್ರಮಣೆಯ ಚಿತ್ರವಾಗಿದ್ದು, ಬ್ರಿಟೀಷ್ ವ್ಯಕ್ತಿ ಮ್ಯಾಟ್ ಪ್ರೀಚರ್ಡ್ ಕೋಕಕೋಲಾ ಕ್ಯಾನ್ ಹಾಗೂ ಕನ್ನಡಿ ಬಳಸಿಕೊಂಡು ಫ್ರೇಮ್ ಮಾಡಿದ್ದಾರೆ.
ಕೆಲಸ ಬಿಟ್ಟ ಉದ್ಯೋಗಿಗೆ ಜಿಡ್ಡುಯುಕ್ತ ನಾಣ್ಯ ನೀಡಿದ ಮಾಲೀಕ
ಮೊದಲ ನೋಟದಲ್ಲಿ ಬರೀ ಒಂದು ಕ್ಯಾನ್ ಹಾಗೂ ಅದರ ಪ್ರತಿಬಿಂಬ ಎಂದು ಕಾಣಿಸುವ ಈ ದೃಶ್ಯದಲ್ಲಿ ಒಂದು ಟ್ವಿಸ್ಟ್ ಇದೆ. ಕೆಲವೇ ನಿಮಿಷಗಳಲ್ಲಿ ವ್ಯಕ್ತಿಯೊಬ್ಬರು ಆ ಕ್ಯಾನ್ ಅನ್ನು ಕನ್ನಡಿಯತ್ತ ಎಸೆಯುತ್ತಾರೆ. ದಿಕ್ಕು ತಪ್ಪಿದ ಕಾರಣ ಹೀಗಾಗುತ್ತದೆ: ಅಲ್ಲಿ ವಾಸ್ತವದಲ್ಲಿ ಎರಡು ಕ್ಯಾನ್‌ಗಳಿದ್ದು ಕನ್ನಡಿಯಂತೆ ಕಾಣುವ ಘನಾಕೃತಿಯ ವಸ್ತು ಕಾರ್ಡ್‌ಬೋರ್ಡ್ ಆಗಿದ್ದು ಅದರಲ್ಲಿರುವ ಓಪನಿಂಗ್‌ನಿಂದ ಹಾಗೆ ಕಾಣುತ್ತದೆ.

ಈ ಚಿತ್ರವು 2020ರಲ್ಲಿ ಬಂದ ದೃಷ್ಟಿ ಭ್ರಮಣೆಯ ಚಿತ್ರಗಳಲ್ಲಿ ಅಗ್ರಪಟ್ಟಿಯಲ್ಲಿದೆ. ಜಪಾನೀ ಕಲಾವಿದ ಕೋಕಿಚಿ ಸುಗಿಹಾರಾ ರಚಿಸಿದ್ದ ಶ್ರಾಡರ್ ಸ್ಟೇರ್‌ಕೇಸ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.