ನಾವು ಮನುಷ್ಯರೇ ಹಾಗೆ. ಹಿಡಿದ ಕೆಲವನ್ನು ತಕ್ಷಣ ಮಾಡಿ ಮುಗಿಸುವುದಿಲ್ಲ. ಆರಂಭದಲ್ಲಿ ಇದ್ದ ಉತ್ಸಾಹ, ಶ್ರದ್ಧೆ ನಂತರದಲ್ಲಿ ಬರುವುದಿಲ್ಲ.
ಸೋಮಾರಿತನ ಹೆಚ್ಚಾಗಿ ಕೆಲಸಕ್ಕೆ ಕೊಟ್ಟ ಗಡುವು ಮೀರುತ್ತಲೇ ಇರುತ್ತವೆ. ಹಾಗೆಂದು ಒಪ್ಪಿಕೊಂಡ ಕೆಲಸವನ್ನು ವರ್ಷಗಟ್ಟಲೆ ಎಳೆಯಲು ಸಾಧ್ಯವೆ ? ಎಷ್ಟು ಬಾರಿ ಗಡುವು ಮೀರಲು ಸಾಧ್ಯ ?
ಆದರೆ, ಇಲ್ಲೊಬ್ಬಾಕೆ ಕಲಾವಿದೆ, ಹೆಲ್ಮೆಟ್ ಮೇಲೆ ಒಂದಿಷ್ಟು ಚಿತ್ತಾರ ಬಿಡಿಸಿಕೊಡಲು ತೆಗೆದುಕೊಂಡಿದ್ದು ಬರೋಬ್ಬರಿ 3 ವರ್ಷ.
ಈ ಕುರಿತು ಸ್ವತಃ ಕಲಾವಿದೆ ಡೇನಿಯಲ್ ಬಾಸ್ಕಿನ್ ಅವರೇ ಟ್ವೀಟ್ ಮಾಡಿದ್ದು, ಪುರಾತತ್ವ ಶಾಸ್ತ್ರಜ್ಞರೊಬ್ಬರು ಹೆಲ್ಮೆಟ್ ಒಂದನ್ನು ಕೊಟ್ಟು, ಅದರ ಮೇಲೆ ಮರುಭೂಮಿ, ಜಿಂಕೆ, ಕುದುರೆಯ ಚಿತ್ತಾರ ಬಿಡಿಸಿಕೊಡಲು 2017 ರಲ್ಲಿ ಕೇಳಿದ್ದರು.
ನನಗಾಗ ಸಮಯ ಇರಲಿಲ್ಲ. ಪುರಸೊತ್ತಿಲ್ಲದ ಕೆಲಸ ಕಾರ್ಯ. ಇದನ್ನು ಹೇಳಿದ್ದಕ್ಕೆ, ಪರವಾಗಿಲ್ಲ, ನನಗೇನೂ ಆತುರ ಇಲ್ಲ. ತಾಳ್ಮೆ ಇಲ್ಲದಿದ್ದರೆ ನಾನು ಏನೇನೂ ಅಲ್ಲ. ನನ್ನ ಕೆಲಸವೂ ಹೊಸತನ್ನು ಹುಡುಕುವುದೇ ಆಗಿದೆ. 2 ಲಕ್ಷ ವರ್ಷ ಕಾದಿದ್ದಿದೆ. ಅಂದರೆ, ಅಷ್ಟು ವರ್ಷ ಹಿಂದಿನ ಅಂಶಗಳ ಅಧ್ಯಯನ ನಡೆಸಲು ಅಷ್ಟೇ ಸಹನೆ ಬೇಕು. ಅದು ನನ್ನಲ್ಲಿದೆ ಎಂದಿದ್ದರು.
ಈ ಮಾತುಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡ ನಾನು, ಹೆಲ್ಮೆಟ್ ಮೇಲೆ ಚಿತ್ತಾರ ಮೂಡಿಸುವ ಕೆಲಸ ಈಗ ಮುಗಿಸಿದ್ದು, ಮೂರು ವರ್ಷಗಳ ನಂತರ ಅವರಿಗೆ ಕಳುಹಿಸಿಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.
https://twitter.com/sunpar1/status/1303342133919834113?ref_src=twsrc%5Etfw%7Ctwcamp%5Etweetembed%7Ctwterm%5E1303342133919834113%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fhow-long-can-you-push-a-deadline-this-is-how-long-an-artist-took-to-create-a-custom-helmet-2863723.html