2020ರಲ್ಲಿ ಕೊರೊನಾ ಸಂಕಷ್ಟದಿಂದ ಕಂಗೆಟ್ಟಿರುವ ಜನತೆ 2021ರ ಹೊತ್ತಿಗೆ ಎಲ್ಲವೂ ಸರಿಯಾಗುತ್ತೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ವಿಶ್ವದ ಅನೇಕ ರಾಷ್ಟ್ರಗಳು ಕೊರೊನಾ ಲಸಿಕೆಯನ್ನೂ ಬಳಕೆ ಮಾಡುತ್ತಿದ್ದು ಮುಂದಿನ ವರ್ಷದ ಹೊತ್ತಿಗೆ ಕೊರೊನಾ ವಿಶ್ವವನ್ನೇ ಬಿಟ್ಟು ತೊಲಗುತ್ತೆ ಎಂಬ ನಂಬಿಕೆ ಅನೇಕರಲ್ಲಿದೆ.
ಕೊರೊನಾಗೆ ಲಸಿಕೆ ಬಳಕೆಯಾಗುತ್ತಿದೆಯಾದರೂ ಈ ರೋಗದ ಬೆದರಿಕೆ ನಮಗೆ ಮುಂದಿನ ವರ್ಷದ ಆರಂಭದಲ್ಲಂತೂ ಇರಲಿದೆ. ಮುಂದಿನ ವರ್ಷದಿಂದ ಕೊರೊನಾದಿಂದ ನೀವು ಸಾಯಬಹುದೋ ಇಲ್ಲವೇ ಮುಂದಿನ ವರ್ಷವೂ ನೀವು ಕೋವಿಡ್ ಹೆಮ್ಮಾರಿಯನ್ನ ಹಿಂದಕ್ಕೆ ಹಾಕುತ್ತೀರಾ ಎಂಬುದನ್ನ ಲೆಕ್ಕ ಹಾಕಲು ಭಾರತೀಯ ಮೂಲದ ಸಂಶೋಧಕರು ಹೊಸ ಆನ್ಲೈನ್ ಕಾಲ್ಕೂಲೇಟರ್ನ್ನ ಅಭಿವೃದ್ಧಿ ಪಡಿಸಿದ್ದಾರೆ.
ನೇಚರ್ ಮೆಡಿಸಿನ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ವಿವಿಧ ಸಮುದಾಯಗಳಲ್ಲಿ ಕೊರೊನಾ ಮರಣದ ಅಪಾಯವನ್ನ ನಿರ್ಣಯಿಸುವಲ್ಲಿ ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಗೆ ಈ ಕ್ಯಾಲ್ಕುಲೇಟರ್ ಉಪಯುಕ್ತವಾಗಲಿದೆ ಎಂದು ಅಂದಾಜಿಸಲಾಗಿದೆ.