alex Certify ಕೊರೊನಾ ವೈರಸ್​ ವಿರುದ್ಧ ಮಾಸ್ಕ್​​ ಎಷ್ಟು ಪರಿಣಾಮಕಾರಿ…? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ವೈರಸ್​ ವಿರುದ್ಧ ಮಾಸ್ಕ್​​ ಎಷ್ಟು ಪರಿಣಾಮಕಾರಿ…? ಇಲ್ಲಿದೆ ಮಾಹಿತಿ

ದೇಶದಲ್ಲಿ ಕೊರೊನಾ ಮಹಾಮಾರಿ ತಾಂಡವ ಶುರುವಾದಾಗಿನಿಂದ ಮಾಸ್ಕ್​ಗಳಿಗೆ ಬೇಡಿಕೆ ಹೆಚ್ಚಾಗಿದೆ.

ಈಗಾಗಲೇ ವಿಶ್ವದ ಅನೇಕ ರಾಷ್ಟ್ರಗಳು ಮಾಸ್ಕ್​ ಬಳಕೆಯನ್ನ ಕಡ್ಡಾಯಗೊಳಿಸಿವೆ. ಈಗಂತೂ ರೂಪಾಂತರಿ ಕೊರೊನಾದ ಆತಂಕ ಶುರುವಾಗಿದ್ದು ಜನತೆ ಇನ್ನಷ್ಟು ಎಚ್ಚರಿಕೆಯಿಂದಿರುವ ಅವಶ್ಯಕತೆ ಇದೆ.

ಕೊರೊನಾ ವಿರುದ್ಧ ಧರಿಸಲಾಗುವ ಮಾಸ್ಕ್​​ಗಳಿಂದ ಕೊರೊನಾ ಹರಡುವ ಅಪಾಯವನ್ನ ಕಡಿಮೆ ಮಾಡಬಹುದಾಗಿದೆ. ಕೆಮ್ಮುವಾಗ ಹಾಗೂ ಸೀನುವಾಗ ನಮ್ಮ ದೇಹದಿಂದ ವೈರಸ್​ ಹರಡುವ ಪ್ರಮಾಣವನ್ನ ಮಾಸ್ಕ್​ಗಳು 99.9 ಶೇಕಡಾದಷ್ಟು ಕಡಿಮೆ ಮಾಡುತ್ತವೆ ಎಂದು ಲ್ಯಾಬ್​ ಎಕ್ಸ್​ಪರ್ಟ್ಸ್ ಹೇಳಿದ್ದಾರೆ.

ಮಾಸ್ಕ್​ ಹಾಕಿಕೊಂಡ ಮನುಷ್ಯನಿಗೆ ಹೋಲಿಸಿದರೆ ಮಾಸ್ಕ್​ ಹಾಕದ ವ್ಯಕ್ತಿ ಸೀನಿನಿಂದ 2 ಮೀಟರ್​ ದೂರದಲ್ಲಿ ನಿಂತ ವ್ಯಕ್ತಿಗೆ ವೈರಸ್​ ಹರಡುವ ಪ್ರಮಾಣ 10 ಸಾವಿರ ಪಟ್ಟು ಅಧಿಕವಾಗಿರುತ್ತೆ ಎಂದು ರಾಯಲ್​ ಸೊಸೈಟಿ ಓಪನ್​ ಸೈನ್ಸ್ ಜರ್ನಲ್ ವರದಿ ಮಾಡಿದೆ. ಮಾಸ್ಕ್​ಗಳು ಸೀನಿನಿಂದ ಹೊರಹೋಗಬಲ್ಲ ಹನಿಗಳ ಪ್ರಸರಣವನ್ನ ಕಡಿಮೆ ಮಾಡಬಲ್ಲವು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹಿರಿಯ ಲೇಖಕ ಇಗ್ನಾಜಿಯೋ ಮಾರಿಯಾ ವಿಯೋಲಾ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...