ಕೇಂಬ್ರಿಜ್: ನೊಬೆಲ್ ಪ್ರಶಸ್ತಿ ಬಂದ ಸುದ್ದಿಯನ್ನು ಖ್ಯಾತ ವಿಜ್ಞಾನಿ ವೆಂಕಟರಮಣ ರಾಮಕೃಷ್ಣನ್ ನಂಬಲು ಸಿದ್ಧರಿರಲಿಲ್ಲ. ಅಭಿನಂದಿಸಿದ ಕಾರ್ಯದರ್ಶಿಗೂ ಗದರಿಸಿದ್ದರು ಎಂಬ ವಿಚಾರ 11 ವರ್ಷಗಳ ಬಳಿಕ ಬಹಿರಂಗವಾಗಿದೆ.
ವೆಂಕಟರಮಣ ರಾಮಕೃಷ್ಣನ್ ಯುನೈಟೆಡ್ ಕಿಂಗ್ಡಮ್ ನ ಪ್ರತಿಷ್ಠಿತ ಕೇಂಬ್ರಿಜ್ ವಿಶ್ವ ವಿದ್ಯಾಲಯದಲ್ಲಿ ಸ್ಟ್ರಕ್ಷರಲ್ ಬಯೋಲಜಿಸ್ಟ್. 2009 ರ ಅಕ್ಟೋಬರ್ 11 ರಂದು ಅವರಿಗೆ ರಸಾಯನಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಘೋಷಣೆಯಾಗಿತ್ತು. ಎಲ್ಲರೂ ಪ್ರಶಸ್ತಿ ಘೋಷಣೆಯಾದಾಗ ಸಂತಸದಿಂದ ಓಡಾಡಿಕೊಂಡಿರುತ್ತಾರೆ. ಆದರೆ, ರಾಮಕೃಷ್ಣನ್ ಮಾತ್ರ ಹಾಗಿರಲಿಲ್ಲ.
ನೊಬೆಲ್ ಪ್ರಶಸ್ತಿ ನೀಡುವ ಸಂಘಟನೆ ಇತ್ತೀಚೆಗೆ ಹಳೆಯ ಘಟನೆಯನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಅ.11 ರಂದು ರಾಮಕೃಷ್ಣನ್ ಅವರು ಎದ್ದು, ನಿತ್ಯ ಕರ್ಮ ಮುಗಿಸಿ ಕಚೇರಿಗೆ ತೆರಳುವ ವೇಳೆ ಅವರ ಬೈಕ್ ಪಂಚರ್ ಆಗಿತ್ತು. ಇದರಿಂದ ರಾಮಕೃಷ್ಣನ್ ಗಡಿಬಿಡಿಯಲ್ಲಿದ್ದರು.
ಕಚೇರಿಯಲ್ಲಿ ಅವರಿಗೆ ಮಹತ್ವದ ಕರೆಯೊಂದು ಕಾದಿತ್ತು. ಅದನ್ನು ಸ್ವೀಕರಿಸಿದ ಅವರು, “ನಿಮಗೆ ನೊಬೆಲ್ ಬಂದಿದೆ” ಎಂದು ಅತ್ತ ಕಡೆಯಿಂದ ಹೇಳಿದ್ದನ್ನು ನಂಬಲಿಲ್ಲ. ಅದ್ಯಾವುದೋ ಸುಳ್ಳು ಕರೆ ಎಂದುಕೊಂಡಿದ್ದರು. ಅವರ ಕಾರ್ಯದರ್ಶಿ ಅಭಿನಂದಿಸಿದಾಗಲೂ ಗದರಿದ್ದರು. ನಂತರ ಆಯ್ಕೆ ಸಮಿತಿಯ ಒಬ್ಬರಿಗೆ ಕರೆ ಮಾಡಿ ಕೇಳಿದ ನಂತರವೇ ಅವರು ತಮಗೆ ಪ್ರಶಸ್ತಿ ಬಂದಿದೆ ಎಂದು ಒಪ್ಪಿಕೊಂಡಿದ್ದರು.
https://www.instagram.com/p/CFw-RHLlM1N/?utm_source=ig_web_copy_link