alex Certify ಕೊರೊನಾ ಅಪಾಯ ತಡೆಯುವಲ್ಲಿ ಮಾಸ್ಕ್​ ಹೇಗೆ ಪಾತ್ರ ವಹಿಸುತ್ತದೆ…..? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಅಪಾಯ ತಡೆಯುವಲ್ಲಿ ಮಾಸ್ಕ್​ ಹೇಗೆ ಪಾತ್ರ ವಹಿಸುತ್ತದೆ…..? ಇಲ್ಲಿದೆ ಮಾಹಿತಿ

ಕೊರೊನಾ ವಿರುದ್ಧ ಮಾಸ್ಕ್​ ಪರಿಣಾಮಕಾರಿ ಅನ್ನೋದು ಸಾಕಷ್ಟು ಅಧ್ಯಯನಗಳಲ್ಲಿ ಈಗಾಗಲೇ ಬೆಳಕಿಗೆ ಬಂದಿದೆ.

ಆದರೆ ಯಾವ ಸನ್ನಿವೇಶಗಳಲ್ಲಿ ಹಾಗೂ ಯಾವ ರೀತಿಯಲ್ಲಿ ಮಾಸ್ಕ್​ನ್ನು ಧರಿಸಿದ್ರೆ ಕೊರೊನಾ ಅಪಾಯದಿಂದ ಪಾರಾಗಬಹುದು ಎಂಬುದರ ಬಗ್ಗೆಯೂ ಇದೀಗ ಅಧ್ಯಯನ ನಡೆಸಲಾಗಿದೆ. ಜಮರ್ನಿಯ ಮ್ಯಾಕ್ಸ್ ಪ್ಲಾಂಕ್​ ವಿಶ್ವವಿದ್ಯಾಲಯ ಇಂತಹದ್ದೊಂದು ಅಧ್ಯಯನವನ್ನ ಕೈಗೊಂಡಿದ್ದು ಇದರಲ್ಲಿ ಯಾವ್ಯಾವ ಸನ್ನಿವೇಶಗಳಲ್ಲಿ ಕೇವಲ ಒಂದು ಸರ್ಜಿಕಲ್ ಮಾಸ್ಕ್​ ನಿಮ್ಮ ಕೋವಿಡ್ ಅಪಾಯದಿಂದ ಪಾರು ಮಾಡಬಲ್ಲುದು ಎಂಬುದನ್ನ ವಿವರಿಸಿದ್ದಾರೆ.

ʼಕೊರೊನಾʼ ಚಿಕಿತ್ಸೆ ಪಡೆಯುತ್ತಿರುವ ತಾಯಿಗೆ ಮಕ್ಕಳ ಭಾವಪೂರ್ಣ ಪತ್ರ

ನಾವು ಉಸಿರಾಡುವ ಗಾಳಿಯಲ್ಲಿ ವೈರಸ್​ಗಳು ಇರುತ್ತವೆ. ಇಂತಹ ಸಂದರ್ಭದಲ್ಲಿ ನೀವು ಕೇವಲ ಒಂದು ಸರ್ಜಿಕಲ್​ ಮಾಸ್ಕ್​​ನ್ನು ಸರಿಯಾಗಿ ಧರಿಸಿಬಿಟ್ಟರೆ ಸಾಕು. ನೀವು ಕೊರೊನಾದ ಅಪಾಯದಿಂದ ಪಾರಾಗಲು ಪರಿಣಾಮಕಾರಿ ಅಸ್ತ್ರವನ್ನ ಹೊಂದಿರುತ್ತೀರಿ ಎಂದು ಯಾಫಂಗ್​ ಚೆಂಗ್​ ಹೇಳಿದ್ರು.

ಮಹಿಳೆಯರೇ ಎಚ್ಚರ……! ವಯಸ್ಸು 30 ರ ನಂತರ ಈ ಬಗ್ಗೆ ಇರಲಿ ಗಮನ

ಆಸ್ಪತ್ರೆಗಳು, ಮೆಡಿಕಲ್ ಸೆಂಟರ್​ ಸೇರಿದಂತೆ ವೈರಸ್​ನ ಅಪಾಯ ಹೆಚ್ಚಿರುವಂತಹ ಸ್ಥಳಗಳಲ್ಲಿ ಎನ್​ 95, ಸರ್ಜಿಕಲ್​ನಂತಹ ಮಾಸ್ಕ್​ಗಳನ್ನ ಬಟ್ಟೆಯ ಮಾಸ್ಕ್​ನೊಂದಿಗೆ ಧರಿಸಬಹುದು. ಲಸಿಕೆಯನ್ನ ಪಡೆದವರು ಸಹ ಮಾಸ್ಕ್​ನ್ನು ಧರಿಸಲೇಬೇಕು. ಕೊರೊನಾವನ್ನ ತಡೆಯುವಲ್ಲಿ ಮಾಸ್ಕ್​ಗಳು ಮಹತ್ವದ ಪಾತ್ರ ವಹಿಸಲಿವೆ ಎಂದು ಅಧ್ಯಯನ ಹೇಳಿದೆ.

ಕೊರೊನಾ ವೈರಸ್​ ಮಾತ್ರವಲ್ಲದೇ ಮಾಸ್ಕ್​ಗಳು ಶ್ವಾಸಕೋಶಕ್ಕೆ ಹಾನಿಯನ್ನುಂಟು ಮಾಡಬಲ್ಲ ರಿನೋವೈರಸ್​ ಹಾಗೂ ಇನ್​ಫ್ಲುಯೆಂಜಾಗಳ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡಲಿವೆ ಎಂದು ಅಧ್ಯಯನ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...