ಎರಡನೇ ವಿಶ್ವ ಮಹಾಯುದ್ಧಕ್ಕೂ ಮುನ್ನ ಜರ್ಮನಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರನ ಹೋಲೋಕಾಸ್ಟ್ ನರಕದಲ್ಲಿ ಬೆಂದು ಬದುಕುಳಿದ ಇಬ್ಬರು ಝೂಮ್ ಮೀಟಿಂಗ್‌ನಲ್ಲಿ ಭೇಟಿಯಾಗಿದ್ದಾರೆ.
ರುತ್ ಬ್ರಾಂಡ್‌ಸ್ಪೈಗಲ್ ಹಾಗೂ ಇಸ್ರೇಲ್ ಶಶಾ ಐಸೆನ್‌ಬರ್ಗ್ ಹೆಸರಿನ ಈ ಇಬ್ಬರು ಆನ್ಲೈನ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ಭೇಟಿಯಾಗಿದ್ದಾರೆ. ಕೊರೋನಾ ವೈರಸ್ ಕಾರಣ ಪ್ರಾರ್ಥನೆಯನ್ನು ಆನ್ಲೈನ್‌ನಲ್ಲೇ ಮಾಡಬೇಕಾಗಿ ಬಂದಿರುವುದು ಈ ಇಬ್ಬರ ಪಾಲಿಗೆ ಭಾರೀ ಸ್ಮರಣೀಯವಾಗಿದೆ.
ಪೋಲೆಂಡ್‌ನ ಒಂದೇ ಊರಿನಲ್ಲಿ ಇಬ್ಬರ ಕುಟುಂಬಗಳೂ ಇದ್ದವು. ನಾಝಿಗಳ ಆಕ್ರಮಣದಿಂದ ತಪ್ಪಿಸಿಕೊಂಡು ಸೋವಿಯತ್‌ನತ್ತ ಪಲಾಯನ ಮಾಡಿದ ಈ ಕುಟುಂಬಗಳು, ಸೈಬೀರಿಯಾದ ಲೇಬರ್ ಕ್ಯಾಂಪ್‌ಗಳಲ್ಲಿ ಕಾಲ ಕಳೆದಿದ್ದಾರೆ. ಅಲ್ಲಿ ಐಸೆನ್‌ಬರ್ಗ್ ಜನಿಸಿದ್ದಾರೆ. ಇದಾದ ಬಳಿಕ, 1949ರಲ್ಲಿ ಆಸ್ಟ್ರಿಯಾದ ಕ್ಯಾಂಪ್ ಒಂದರಲ್ಲಿ ಭೇಟಿಯಾದ ಈ ಇಬ್ಬರೂ ಭಾರೀ ಸ್ನೇಹಿತರಾಗಿಬಿಟ್ಟಿದ್ದಾರೆ. ಇದಾದ ಬಳಿಕ ಬೇರಾದ ಇಬ್ಬರು 70 ವರ್ಷಗಳ ಬಳಿಕ ಹೀಗೆ ಮತ್ತೆ ಭೇಟಿಯಾಗಿದ್ದಾರೆ.
ಫಿಲೆಡಿಲ್ಫಿಯಾದಲ್ಲಿರುವ ಬ್ರಾಂಡ್‌ಸ್ಪೈಗೆಲ್ ಕಳೆದ ಸೆಪ್ಟೆಂಬರ್‌ನಲ್ಲಿ ಯಾಮ್ ಕಿಪ್ಪರ್ ಸೇವೆಯ ಸಂದರ್ಭದಲ್ಲಿ ಅವರ ಪುತ್ರ ಅರೇಂಜ್ ಮಾಡಿದ್ದ ಝೂಮ್ ಸಭೆಯಲ್ಲಿ ಸಶಾ ಐಸೆನ್ ಬರ್ಗ್‌ರನ್ನು ಭೇಟಿಯಾಗಿದ್ದಾರೆ.