
ಮೆಸಾಚುಸೆಟ್ಸ್‌ನ ಲಿಜ್ಜಿ ಬೋರ್ಡೆನ್ ಬೆಡ್ ಮತ್ತು ಬ್ರೇಕ್‌ಫಾಸ್ಟ್ ಸಂಗ್ರಹಾಲಯವನ್ನು ಹರಾಜಿಗೆ ಇಡಲಾಗಿದೆ. ತನ್ನ ಕರಾಳ ಇತಿಹಾಸದಿಂದ ಈ ಸಂಗ್ರಹಾಲಯವು ಪ್ರವಾಸಿ ಆಕರ್ಷಣೆಯಾಗಿದೆ. ಇದೀಗ ಈ ಬಂಗಲೆಯನ್ನು ಹರಾಜಿಗೆ ಇಡಲಾಗಿದ್ದು, ಇದರ ಮೂಲ ಬೆಲೆಯನ್ನು $2 ದಶಲಕ್ಷಕ್ಕೆ ಫಿಕ್ಸ್ ಮಾಡಲಾಗಿದೆ.
1892ರ ಆಗಸ್ಟ್ 4ರಂದು ಆಂಡ್ರ‍್ಯೂ ಮತ್ತು ಅಬ್ಬಿ ಬೋರ್ಡೆನ್ ಎಂಬ ಇಬ್ಬರು ವ್ಯಕ್ತಿಗಳು ನಿಗೂಢವಾಗಿ ಕೊಲೆಯಾಗಿದ್ದು, ಪ್ರಕರಣವವನ್ನು ಇನ್ನೂ ಬೇಧಿಸಲು ಆಗಿಲ್ಲ. ತನ್ನ ಮಲತಾಯಿ ಅಬ್ಬಿ ಹಾಗೂ ತಂದೆ ಆಂಡ್ರ‍್ಯೂರನ್ನು ಕೊಂದ ಆಪಾದನೆ ಮೇಲೆ ಲಿಜ್ಜಿ ಬೋರ್ಡೆನ್‌ರನ್ನು ತನಿಖೆ ನಡೆಸಲಾಯಿತು. ಆದರೆ ಆಕೆಯ ವಿರುದ್ಧ ಸರಿಯಾದ ಸಾಕ್ಷ್ಯಾಧಾರಗಳಿಲ್ಲ ಕಾರಣ ಆಕೆಯನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.
ಸದ್ಯ ಈ ಮನೆ ಸಂಗ್ರಹಾಲಯವಾಗಿದ್ದು ಜಗತ್ತಿನಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಊಟ ಹಾಗೂ ವಸತಿ ವ್ಯವಸ್ಥೆ ಮಾಡುವ ಮೂಲಕ ಒಳ್ಳೆಯ ಬ್ಯುಸಿನೆಸ್ ಮಾಡುವ ಅವಕಾಶ ಇರುವ ಕಾರಣ ಅನೇಕ ಮಂದಿ ಈ ಆಸ್ತಿಯನ್ನು ಖರೀದಿ ಮಾಡಲು ಆಸಕ್ತಿ ತೋರಿದ್ದಾರೆ.
ಎಂಟು ಬೆಡ್‌ರೂಂಗಳ ಈ ಮನೆಯನ್ನು 1845ರಲ್ಲಿ ನಿರ್ಮಾಣ ಮಾಡಲಾಗಿದೆ.