ಈ ಪ್ರಾಣಿಯ ರಕ್ತ ಅಮೂಲ್ಯವಾದುದು. ಈ ಜೀವಿಯ ರಕ್ತದಿಂದ ಕೋವಿಡ್ -19ಗೆ ಲಸಿಕೆ ತಯಾರಿಸಬಹುದು ಎಂದು ವಿಜ್ಞಾನಿಗಳು ನಂಬಿದ್ದಾರೆ. ಔಷಧೀಯ ಕಂಪನಿಗಳು ಇದ್ರ ರಕ್ತಕ್ಕಾಗಿ ಸಾಕಷ್ಟು ಖರ್ಚು ಮಾಡಲು ಸಿದ್ಧವಿವೆ. ಈ ಜೀವಿಯ ನೀಲಿ ರಕ್ತದಿಂದ ಲಸಿಕೆ, ಔಷಧಿಗಳನ್ನು ತಯಾರಿಸಲಾಗುತ್ತದೆ.
ಈ ಜೀವಿಯ ಹೆಸರು Horseshoe Crab. ಇದು ಅಪರೂಪದ ಏಡಿ ಜಾತಿಯಾಗಿದೆ. ಇದ್ರ ಒಂದು ಲೀಟರ್ ನೀಲಿ ರಕ್ತದ ಬೆಲೆ 11 ಲಕ್ಷ ರೂಪಾಯಿಗಳು. ತಜ್ಞರು ಹೇಳುವಂತೆ ಇದು ವಿಶ್ವದ ಅತ್ಯಂತ ಹಳೆಯ ಜೀವಿಗಳಲ್ಲಿ ಒಂದಾಗಿದೆ.
ಇದ್ರ ರಕ್ತದಿಂದ ಅನೇಕ ಔಷಧಿಗಳನ್ನು ತಯಾರಿಸಲಾಗುತ್ತದೆ. ಇವು ಮೇ – ಜೂನ್ ತಿಂಗಳಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹುಣ್ಣಿಮೆಯ ಸಮಯದಲ್ಲಿ ಅವು ಸಮುದ್ರದ ಮೇಲ್ಮೈಗೆ ಹೆಚ್ಚಾಗಿ ಬರುತ್ತವೆ.