ಆಕಾಶದಲ್ಲಿ ಹಾರಾಡುತ್ತಿದ್ದ ಹೆರೊನ್ ಜಾತಿಯ ಪಕ್ಷಿಯ ಹೊಟ್ಟೆಯನ್ನ ಬಗೆದು ಹಾವು ಹೊರಬಂದ ಅಪರೂಪದ ಘಟನೆ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.
ಮೇರಿಲ್ಯಾಂಡ್ನಲ್ಲಿ ಇಂಜಿನಿಯರ್ ಆಗಿರುವ ಸ್ಯಾಮ್ ಡೇವಿಸ್ ಎಂಬವರು ಈ ಅಪರೂಪದ ಫೋಟೋವನ್ನ ಸೆರೆಹಿಡಿದಿದ್ದಾರೆ. ಪಕ್ಷಿಯ ಹೊಟ್ಟೆಯಿಂದ ಹಾವು ಹೊರಗೆ ನೇತಾಡುತ್ತಿರೋದನ್ನ ನೀವು ಈ ಫೋಟದಲ್ಲಿ ಕಾಣಬಹುದಾಗಿದೆ.
ಆದರೆ ಇಷ್ಟಾದರೂ ಸಹ ಹಕ್ಕಿಯ ಹಾರಾಟದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ ಅಂತಾ ಫೋಟೋಗ್ರಾಫರ್ ಸ್ಯಾಮ್ ಡೇವಿಸ್ ಹೇಳಿದ್ದಾರೆ.
ಈ ಹಕ್ಕಿಯಿಂದ ಸರಿ ಸುಮಾರು 90 ಮೀಟರ್ ದೂರದಲ್ಲಿದ್ದ ಸ್ಯಾಮ್ ಮೊದಲು ಹಕ್ಕಿಯ ಕೊರಳಿಗೆ ಹಾವು ನೇತು ಹಾಕಿಕೊಂಡಿದೆ ಎಂದೇ ಭಾವಿಸಿದ್ದರಂತೆ. ಆದರೆ ಅದು ಹೊಟ್ಟೆಯಿಂದ ಹೊರಬಂದಿದೆ ಅನ್ನೋದು ಬಳಿಕ ಗೊತ್ತಾಗಿದೆ. ಅಲ್ಲದೇ ಆ ಹಾವು ಪಕ್ಷಿಗೆ ಕಚ್ಚಿಲ್ಲ ಅಂತಾ ಸ್ಯಾಮ್ ಹೇಳಿದ್ದಾರೆ.