ನಿರಾಶ್ರಿತ ಮಹಿಳೆಯೊಬ್ಬಳು ಜರ್ಮನಿಯ ನ್ಯೂರೆಂಬರ್ಗ್ನ ಬವೇರಿಯನ್ ನಗರದಲ್ಲಿ ಮುಂಜಾನೆ ಕೊರೆಯುವ ಚಳಿಯ ನಡುವೆಯೇ ಬೀದಿಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಮಹಿಳೆ ಹಾಗೂ ಆಕೆಯ ಒಡನಾಡಿ ಮತ್ತು ನವಜಾತ ಶಿಶುವನ್ನ ಗಮನಿಸಿದ್ದಾರೆ. ಮುಂಜಾನೆ 5 ಗಂಟೆ ಸುಮಾರಿಗೆ ಸಬ್ ವೇ ನಿಲ್ದಾಣದ ವೆಂಟೀಲೇಷನ್ ಗ್ರೇಟ್ ಹೊರಾಂಗಣದಲ್ಲಿ ಈಕೆ ಮಗುವಿಗೆ ಜನ್ಮ ನೀಡಿದ್ದಾಳೆ ಎನ್ನಲಾಗಿದೆ.
ಮೈನಸ್ 15 ಡಿಗ್ರಿ ಸೆಲ್ಸಿಯಸ್ನಲ್ಲಿ ಚಳಿಯಲ್ಲಿ ಒದ್ದಾಡುತ್ತಿದ್ದ ತಾಯಿ ಹಾಗೂ ಮಗುವನ್ನ ಪೊಲೀಸರು ಸ್ಲೀಪಿಂಗ್ ಬ್ಯಾಗ್ನಲ್ಲಿ ಮಲಗಿಸಿದ್ದಾರೆ. ಬಳಿಕ ಅಧಿಕಾರಿಗಳು ತಾಯಿ ಹಾಗೂ ಮಗುವನ್ನ ಆಸ್ಪತ್ರೆಗೆ ಸೇರಿಸಿದ್ದಾರೆ.