ಕೊರೊನಾ ಲಾಕ್‌ಡೌನ್ ಕಾರಣದಿಂದ ಜನರು ತಮ್ಮ ಹಾಲಿಡೇ ಕಾರ್ಯಕ್ರಮಗಳನ್ನು ಕ್ಯಾನ್ಸಲ್ ಮಾಡಿಕೊಂಡು ಮನೆಗಳಲ್ಲೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಸಮಯದಲ್ಲಿ ಮನೆಯಲ್ಲೇ ಕುಳಿತುಕೊಂಡು ತಮ್ಮ ರಜೆಯ ಚಿತ್ರಗಳನ್ನು ರೀಕ್ರಿಯೇಟ್ ಮಾಡಲು ಗೃಹಬಳಕೆ ವಸ್ತುಗಳನ್ನ ಬಳಸಿಕೊಂಡಿದ್ದಾರೆ ಇನ್‌ಸ್ಟ್ರಾಗ್ರಾಂ ಟ್ರಾವೆಲ್ ಬ್ಲಾಗರ್ ಶರೋನ್ ವಾಗ್.
ದಕ್ಷಿಣ ಆಫ್ರಿಕಾದ ಕೇಪ್‌ಟೌನ್ ವಾಸಿಯಾದ ವಾಗ್ ‘then and now’ ಥೀಮ್‌ನಲ್ಲಿ ಬಹಳಷ್ಟು ಆಕರ್ಷಕ ಚಿತ್ರಗಳನ್ನು ರಚಿಸಿ ಹಂಚಿಕೊಂಡಿದ್ದಾರೆ.
ಟಾಯ್ಲೆಟ್ ಪೇಪರ್ ಬಳಸಿಕೊಂಡು ತಾಜ್ ಮಹಲ್ ಸೃಷ್ಟಿಸಿದ್ದೇ ಇರಬಹುದು, ವೈನ್ ಬಾಟಲಿ ಬಳಸಿಕೊಂಡು ಐಫೆಲ್ ಟವರ್ ಮುಂದೆ ನಿಂತಂತೆ ಫೋಟೋ ತೆಗೆದಿದ್ದು ಸೇರಿದಂತೆ ಅನೇಕ ಪ್ರೇಕ್ಷಣೀಯ ಸ್ಥಳಗಳಲ್ಲಿ ನಿಂತಂತೆ ತಮ್ಮ ಚಿತ್ರಗಳನ್ನು ಹಂಚಿಕೊಂಡಿರುವ ವಾಗ್, ಟ್ರಾವೆಲಿಂಗ್ ಅನ್ನು ತಾವೆಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹಂಚಿಕೊಂಡಿದ್ದಾರೆ.