ಕ್ಯಾನಬಿಗಳನ್ನು ಮಾದಕ ದ್ರವ್ಯದ ಪಟ್ಟಿಯಿಂದ ಹೊರಗೆ ಇಡುತ್ತಲೇ ಥಾಯ್ಲೆಂಡ್‌ನಲ್ಲಿ ಈ ದ್ರವ್ಯದ ಸಸಿಗಳನ್ನು ಬೆಳೆಯಲು ಜನರಲ್ಲಿ ಭಾರೀ ಉತ್ಸಾಹ ಕಂಡು ಬರುತ್ತಿದೆ.
ಈ ಮೂಲಕ ಕ್ಯಾನಬಿಯುಕ್ತ ಖಾದ್ಯಗಳನ್ನು ಬಡಿಸುವ ಮೂಲಕ ಹೆಚ್ಚಿನ ಸಂಖ್ಯೆಲ್ಲಿ ವಿದೇಶೀ ಪ್ರವಾಸಿಗರನ್ನು ಆಕರ್ಷಿಸಲು ಥಾಯ್ ಮಂದಿ ಸಿದ್ಧವಾಗುತ್ತಿದ್ದಾರೆ.
ಇಲ್ಲಿನ ಪ್ರಾಚೀನ್ ಬುರಿ ಎಂಬಲ್ಲಿ ಇರುವ ಚಾವೋ ಪ್ಯಾ ಅಭಾಯ್‌ಭುಬೆಜರ್ ಹೆಸರಿನ ಆಸ್ಪತ್ರೆಯೊಂದರ ರೆಸ್ಟೋರಂಟ್ ಒಂದು ಈ ಕ್ಯಾನಬಿಗಳನ್ನು ಒಳಗೊಂಡ ಸಲಾಡ್‌ಗಳ ಜೊತೆಗೆ ತನ್ನದೇ ಆದ ’ಹ್ಯಾಪಿ ಮೀಲ್’ಗಳನ್ನು ಸಿದ್ಧಪಡಿಸಲು ಮುಂದಾಗಿದೆ.
ದೇಹದ ನೋವು ಹಾಗೂ ದಣಿವನ್ನು ಶಮನ ಮಾಡುವಲ್ಲಿ ಮಾರಿಯಾನಾದ ಪಾತ್ರದ ಬಗ್ಗೆ ಈ ಆಸ್ಪತ್ರೆ ಆಳವಾದ ಅಧ್ಯಯನ ಹಾಗೂ ಸಂಶೋಧನೆಯಲ್ಲಿ ತೊಡಗಿಕೊಂಡು ಬಂದಿದೆ. 2017ರಿಂದ ಥಾಯ್ಲೆಂಡ್‌ನಲ್ಲಿ ಕ್ಯಾನಬಿ ಬಳಕೆ ಅಧಿಕೃತವಾಗಿದ್ದು, ಅಂದಿನಿಂದ ಸಾಕಷ್ಟು ಸಂಖ್ಯೆಯಲ್ಲಿ ಮಾರಿಯಾನಾ ಕ್ಲಿನಿಕ್‌ಗಳು ಆರಂಭಗೊಂಡಿವೆ.
“ಸಣ್ಣ ಪ್ರಮಾಣದಲ್ಲಿ ಆದರೂ ಕ್ಯಾನಬಿ ಎಲೆಗಳನ್ನು ಆಹಾರದಲ್ಲಿ ಬೆರೆಸಿಕೊಂಡು ಸೇವನೆ ಮಾಡುವುದರಿಂದ ರೋಗಿಯು ಬೇಗನೇ ತನ್ನ ಅನಾರೋಗ್ಯದಿಂದ ಗುಣಮುಖನಾಗುತ್ತಾನೆ. ಈ ಎಲೆಗಳು ಹೊಟ್ಟೆ ಹಸಿವು ಹೆಚ್ಚಿಸಿ, ಚೆನ್ನಾಗಿ ನಿದ್ರೆ ಮಾಡಲು ನೆರವಾಗುತ್ತವೆ,” ಎನ್ನುತ್ತಾರೆ ಆಸ್ಪತ್ರೆಯ ಪ್ರಾಜೆಕ್ಟ್ ಒಂದರ ಲೀಡರ್ ಪಕಾಕ್ರೊಂಗ್ ಕ್ವಾಂಕಾವೋ.