
ಆಸ್ಪತ್ರೆ ಕಟ್ಟಡಕ್ಕೆ ಬೆಂಕಿ ಬಿದ್ದರೂ ಸಹ ತಾವು ಮಾಡುತ್ತಿದ್ದ ತೆರೆದ ಹೃದಯದ ಶಸ್ತ್ರಚಿಕಿತ್ಸೆಯನ್ನು ಮಾಡಿ ಮುಗಿಸಿದ ರಷ್ಯಾ ವೈದ್ಯರ ತಂಡವೊಂದು ನಿಜವಾದ ಹೀರೋಯಿಸಂ ಮೆರೆದಿದೆ.
ಆಗ್ನೇಯ ರಷ್ಯಾದ ಬ್ಲಾಗೋವೆಶ್ಚೆಂಸ್ಕ್‌ನಲ್ಲಿರುವ ಅಮುರ್ ಪ್ರಾಂತೀಯ ವೈದ್ಯಕೀಯ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆ ಮಾಡುತ್ತಿದ್ದ ವೈದ್ಯರು ರೋಗಿಯ ಎದೆಗೆ ನಾಜೂಕಾದ ಹೃದಯ ಶಸ್ತ್ರಚಿಕಿತ್ಸೆಯೊಂದನ್ನು ಮಾಡುತ್ತಿದ್ದರು. ಈ ವೇಳೆ ಅಗ್ನಿ ಅನಾಹುತ ಸಂಭವಿಸಿ ಇಡಿ ಆಸ್ಪತ್ರೆಯೇ ಬೆಂಕಿ ಹಾಗೂ ಹೊಗೆಯಿಂದ ಆವರಿಸಿತ್ತು.
ಲಟ್ಟಣಿಗೆ ಹಿಡಿದು ಬೆನ್ನಟ್ಟಿದ ಪತ್ನಿಗೆ ಪತಿಯಿಂದ ಸಿಕ್ತು ಸೂಪರ್ ʼಗಿಫ್ಟ್ʼ
ಇಂಥ ಪರಿಸ್ಥಿತಿಯಲ್ಲೂ ಸಹ ಶಸ್ತ್ರಚಿಕಿತ್ಸೆಯ ಕೋಣೆಯಿಂದ ಹೊರಬರಲು ನಿರಾಕರಿಸಿದ ಮುಖ್ಯ ಸರ್ಜನ್ ವ್ಯಾಲೆಂಟಿನ್ ಫಿಲಟೊವ್, ಥಿಯೇಟರ್‌ನಿಂದ ಹೊಗೆಯನ್ನು ಬೇರೆಡೆ ತಿರುಗಿಸಲು ಫ್ಯಾನ್‌ಗಳನ್ನು ಬಳಸಿಕೊಂಡು ಸರ್ಜರಿ ಮಾಡಿ ಮುಗಿಸಿದ್ದಾರೆ.
ಎಂಟು ವೈದ್ಯರು ಹಾಗೂ ನರ್ಸ್‌ಗಳ ತಂಡವು ಈ ಅವಘಡದ ನಡುವೆಯೇ ಎರಡು ಗಂಟೆಗಳ ಕಾಲ ನಾಜೂಕಾಗಿ ಶಸ್ತ್ರಚಿಕಿತ್ಸೆ ಮಾಡಿ ಮುಗಿಸಿದ್ದಾರೆ. ಬಳಿಕ ರೋಗಿಯು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳಲೆಂದು ಆತನನ್ನು ಬೇರೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.