ತಾಯಿಯ ಅಸಹಾಯಕತೆಗೆ ನೆರವಾದ ಅಪರಿಚಿತ: ಫೇಸ್ಬುಕ್ನಲ್ಲಿ ತಿಳಿಸಿದ ʼಧನ್ಯವಾದʼ ಪೋಸ್ಟ್ಗೆ ನೆಟ್ಟಿಗರು ಫಿದಾ 16-04-2021 7:42AM IST / No Comments / Posted In: Latest News, International ತನ್ನ ಬುದ್ಧಿಮಾಂದ್ಯ ಪುತ್ರನನ್ನ ಕಾಪಾಡಿದ ಅಪರಿಚಿತನನ್ನ ತಾಯಿಯೊಬ್ಬರು ಹೀರೋ ಎಂದು ಬಣ್ಣಿಸಿ ಫೇಸ್ಬುಕ್ನಲ್ಲಿ ಪೋಸ್ಟ್ ಶೇರ್ ಮಾಡಿದ್ದು ಸಖತ್ ವೈರಲ್ ಆಗಿದೆ. ನೆಟಾಲಿ ಫರ್ನಾಡೋ ಎಂಬ ಹೆಸರಿನ ಮಹಿಳೆ ಸಮುದ್ರದ ಬದಿಯಲ್ಲಿ ತಮ್ಮ ಪುತ್ರ ರುಡಿ ಜೊತೆ ನಡೆದುಕೊಂಡು ಹೋಗ್ತಿದ್ರು. ರುಡಿ ಸೀದಾ ನೆಲದ ಮೇಲೆ ಬಿದ್ದು ಆಕ್ರೋಶವನ್ನ ಹೊರಹಾಕೋಕೆ ಶುರು ಮಾಡಿದೆ. ಇದು ಮಗುವಿನ ಸಮಸ್ಯೆಯಾಗಿದೆ. ಅಂದರೆ ಈ ಮಗುವಿನ ಹಠವನ್ನ ಕಂಟ್ರೋಲ್ ಮಾಡೋದು ತುಂಬಾನೇ ಕಷ್ಟದ ಕೆಲಸ ಎಂದು ತಾಯಿ ವಿವರಿಸಿದ್ದಾರೆ. ರಸ್ತೆಯ ಮೇಲೆ ಬಿದ್ದು ಒದ್ದಾಡುತ್ತಿದ್ದ ಮಗುವನ್ನ ಕಂಡು ಅನೇಕರು ಕೋಪ ಮಾಡಿಕೊಂಡರು. ಆದರೆ ಅಲ್ಲೇ ಇದ್ದ ಅಪರಿಚಿತ ವ್ಯಕ್ತಿಯೊಬ್ಬ ರುಡಿ ರೀತಿಯಲ್ಲೇ ಮಲಗಿ ಮಾತನಾಡೋಕೆ ಶುರು ಮಾಡಿದ್ರು. ಈ ಮೂಲಕ ಆಕ್ರೋಶದಲ್ಲಿ ತನ್ನ ಸ್ಥಿಮಿತವನ್ನೇ ಕಳೆದುಕೊಂಡಿದ್ದ ಮಗುವನ್ನ ಸರಿ ಮಾಡಿದ್ದಾರೆ. ಈ ಘಟನೆಯ ಬಗ್ಗೆ ಫೇಸ್ಬುಕ್ನಲ್ಲಿ ತಾಯಿ ನೆಟಾಲಿ ತಮ್ಮ ಅನುಭವವನ್ನ ಶೇರ್ ಮಾಡಿದ್ದಾರೆ. ಈ ಅಪರಿಚಿತ ವ್ಯಕ್ತಿ ನನ್ನ ಮಗುವಿನ ಜೀವವನ್ನ ಕಾಪಾಡಿದ್ದಾರೆ. ನನ್ನ ಮಗು ಭಾವನಾತ್ಮಕವಾಗಿ ಕುಗ್ಗಿ ಹೋದಾಗ ಆತ ನಿಯಂತ್ರಣಕ್ಕೇ ಸಿಗೋದಿಲ್ಲ. ಆತನ ಕೋಪ ಎಷ್ಟರ ಮಟ್ಟಿಗೆ ಇರುತ್ತೆ ಅಂದರೆ ಅದನ್ನ ಕಂಟ್ರೋಲ್ ಮಾಡೋದು ಯಾರಿಂದಲೂ ಸಾಧ್ಯವಾಗುವ ಕೆಲಸವಲ್ಲ. ಆದರೆ ಈ ಅಪರಿಚಿತ ವ್ಯಕ್ತಿ ಮಾತ್ರ ನನ್ನ ಮಗುವನ್ನ ಸರಿ ಮಾಡಿದ್ದಾರೆ. ಈ ಅಪರಿಚಿತ ವ್ಯಕ್ತಿ ಹೀರೋನಂತೆ ನನ್ನ ಮಗುವನ್ನ ಕಾಪಾಡಿದ್ದಾರೆ. ಈ ರೀತಿಯ ಮನುಷ್ಯರು ನಮ್ಮ ಸುತ್ತಲೂ ಇರಬೇಕು. ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ.