ದಶಕಗಳ ದುಶ್ಮನಿ ಮರೆತು ಹೊಸ ಬಾಂಧವ್ಯಕ್ಕೆ ಮುಂದಾಗುತ್ತಿರುವ ಇಸ್ರೇಲ್ ಹಾಗೂ ಯುಎಇಗಳ ಸಹಭಾಗಿತ್ವದಲ್ಲಿ ಮ್ಯೂಸಿಕ್ ವರ್ಕ್ ಒಂದು ಹೊರಬಂದಿದೆ.
ಅರೇಬಿಕ್ ಭಾಷೆಯಲ್ಲಿ “ಹಲೋ ಯೂ” ಎಂದು ಅರ್ಥ ಬರುವ “ಅಹ್ಲಾನ್ ಬಿಕ್,” ಹೆಸರಿನ ಈ ಯುಗಳದ ಲಿರಿಕ್ಸ್ನಲ್ಲಿ ಅರೇಬಿಕ್, ಹಿಬ್ರೂ ಹಾಗೂ ಇಂಗ್ಲಿಷ್ ಪದಗಳೂ ಇವೆ.
ಇಸ್ರೇಲೀ ಹಾಡುಗಾರ ಎಲ್ಕಾನಾ ಮಾರ್ಝಿಯಾನೋ ಹಾಗೂ ಎಮಿರೇಟ್ ಗಾಯಕ ವಾಲಿದ್ ಅಲ್ಜಾಸಿಮ್ ರಚನೆ ಮಾಡಿರುವ ಈ ಹಾಡಿಗೆ ಯೂಟ್ಯೂಬ್ನಲ್ಲಿ 11 ಲಕ್ಷಕ್ಕಿಂತ ಹೆಚ್ಚಿನ ವೀವ್ಸ್ ಬಂದಿದೆ.
ಅಮೆರಿಕ ಮಧ್ಯಸ್ಥಿಕೆಯಲ್ಲಿ, ತಮ್ಮ ನಡುವಿನ ಸಂಬಂಧಕ್ಕೆ ಹೊಸ ಭಾಷ್ಯ ಬರೆಯಲಾಗಿದೆ ಎಂದು ಇಸ್ರೇಲ್ ಹಾಗೂ ಯುಎಇಗಳೆರಡೂ ಕಳೆದ ಆಗಸ್ಟ್ನಲ್ಲಿ ಘೋಷಣೆ ಮಾಡಿದ್ದವು. ಬಹಳ ವರ್ಷಗಳ ಕಾಲ ಉಭಯ ದೇಶಗಳ ನಡುವೆ ಆರ್ಥಿಕ ಹಾಗೂ ಭದ್ರತಾ ಸಹಕಾರಗಳು ನೆನೆಗುದಿಯಲ್ಲಿದ್ದವು.