ತನ್ನ 11ನೇ ವಯಸ್ಸಿನಿಂದಲೂ ದೇಹವನ್ನು ತನ್ನಿಚ್ಛೆಯಂತೆ ಮಾರ್ಪಾಡು ಮಾಡಿಕೊಳ್ಳುತ್ತಿರುವ ವ್ಯಕ್ತಿಯೊಬ್ಬ, ತನ್ನ ಸಹಜಾವತಾರ ಹೇಗಿರುತ್ತದೆ ಎಂದು ನೋಡಲು ಇಚ್ಛಿಸಿದ್ದಾನೆ.
ಎಥಾನ್ ಹೆಸರಿನ 24 ವರ್ಷದ ಈತನಿಗೆ ದೇಹದ ಮೇಲೆ ಟ್ಯಾಟೂನಂಥ ಕಲೆಯನ್ನು ಹಾಕಿಸಿಕೊಳ್ಳುವುದು ಫ್ಯಾಶನ್. ತನ್ನ ದೇಹದ ಮೇಲೆ ಅದೆಷ್ಟು ಟ್ಯಾಟೂಗಳು ಇವೆ ಎಂಬುದು ಖುದ್ದು ಈತನಿಗೇ ಗೊತ್ತಿಲ್ಲ. ಆಸ್ಟ್ರೇಲಿಯಾದ ಈತ ತನ್ನ ಕಿವಿಗೆ ಓಲೆಗಳನ್ನು ಹಾಕಿಕೊಂಡಿರುವುದಲ್ಲದೇ ಮಖದ ಮೇಲೆಲ್ಲಾ ಟ್ಯಾಟೂ ಹಾಕಿಕೊಂಡಿದ್ದಾನೆ. ಅಲ್ಲದೇ ಕಣ್ಣಿನ ಬಿಳಿ ಭಾಗವನ್ನು ಕಾಣದಂತೆ ಮಾಡಿಕೊಂಡಿರುವ ಈತ ನಾಲಿಗೆಯನ್ನೂ ಸೀಳಿಸಿಕೊಂಡಿದ್ದಾನೆ.
ಮನೆಯವರಿಗೆಲ್ಲಾ ಬಿಗ್ ಶಾಕ್: ಪರೀಕ್ಷೆ ಬರೆಯಲು ಹೋಗಿ ಮದುವೆಯಾದ ವಿದ್ಯಾರ್ಥಿನಿ…!
“ನನಗೆ ಎಲ್ಲರಂತೆ ಕಾಣುವುದು ಇಷ್ಟವಿಲ್ಲ,” ಎನ್ನುವ ಈತ ಗರ್ಲ್‌ಫ್ರೆಂಡ್ ಮೆಗ್‌ಗೆ ಅಚ್ಚರಿ ಕೊಡಲೆಂದು ಇತ್ತೀಚೆಗೆ ಟ್ಯಾಟೂ ಇಲ್ಲದ ತನ್ನ ಮುಖ ತೋರಿಸಲು ಮೇಕಪ್ ಕವರ್ ಹಾಕಿಕೊಂಡಿದ್ದ. ಈತನ ಈ ಎರಡು ಅತಿರೇಕದ ಅವತಾರಗಳ ಚಿತ್ರ ವೈರಲ್ ಆಗಿದೆ.