ವಯಸ್ಸಾದವರು ಹಾಗೂ ವಿವಾಹವಾದರ ಪಾಲಿಗೆ 2020 ಕಠಿಣ ವರ್ಷವಾಗಿ ಪರಿಣಮಿಸಿದೆ.
ಕೊರೊನಾ ವೈರಸ್ ಹೆಚ್ಚಾಗಿ ವೃದ್ಧರನ್ನೇ ಟಾರ್ಗೆಟ್ ಮಾಡುತ್ತೆ. ಕೊರೊನಾ ವೈರಸ್ ಸೋಂಕಿಗೆ ಒಳಗಾದರೂ ಸಹ 20, 30 ಹಾಗೂ 40 ವರ್ಷ ಆಸುಪಾಸಿನವರು ಬೇಗನೇ ಗುಣಮುಖರಾಗಿಬಿಡ್ತಾರೆ. ಆದರೆ 60 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಜೀವಕ್ಕೆ ಅಪಾಯ ತರಬಲ್ಲದು.
ಅದರಲ್ಲೂ 80 ಹಾಗೂ 90 ವರ್ಷ ಪ್ರಾಯದವರಂತೂ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಹ ಅದು ಕಡಿಮೆನೇ. ಈಗಾಗಲೇ ಕೊರೊನಾದಿಂದ ಸಾವಿಗೀಡಾದ ವೃದ್ಧರ ಅದೆಷ್ಟೋ ಕತೆಗಳನ್ನ ಕೇಳಿದ್ದೇವೆ. ಇಳಿವಯಸ್ಸಿನಲ್ಲೂ ಕೊರೊನಾ ಜಯಿಸಿ ಬಂದವರನ್ನೂ ಕಂಡಿದ್ದೇವೆ. ಈ ಸಾಲಿಗೆ ಬ್ರಿಟನ್ನ ಗ್ರೇಟರ್ ಮ್ಯಾಂಚೆಸ್ಟರ್ನ ಈ ವೃದ್ಧ ಜೋಡಿಯೂ ಸೇರಿದೆ.
ಸ್ಟ್ಯಾನ್ಲಿ ಹಾರ್ಬರ್ ಹಾಗೂ ಮಾವಿಸ್ ಹಾರ್ಬರ್ ದಂಪತಿ ಇಬ್ಬರು 80 ವರ್ಷ ಮೇಲ್ಪಟ್ಟವರು. ಈ ಜೋಡಿ 60 ವರ್ಷಗಳ ಕಾಲ ಜೊತೆಯಾಗಿ ಸಂಸಾರ ನಡೆಸಿದೆ. ಆದರೆ ಇವರಿಗೆ ಕಳೆದ ವರ್ಷ ಫೆಬ್ರವರಿಯಿಂದ ದೂರಾಗಿ ಇರುವಂತೆ ಸೂಚನೆ ನೀಡಲಾಗಿತ್ತಂತೆ.
ಬ್ರಿಟನ್ನಲ್ಲಿ ಕೊರೊನಾ ವೈರಸ್ ಆರಂಭವಾಗುತ್ತಿದ್ದಂತೆಯೇ ಈ ಜೋಡಿಯನ್ನ ಪ್ರತ್ಯೇಕ ಸ್ಥಳದಲ್ಲಿ ಐಸೋಲೇಷನ್ನಲ್ಲಿ ಇಡಲಾಗಿತ್ತು. ಕೊನೆಗೂ ಈ ದಂಪತಿ 14 ದಿನಗಳ ಕ್ವಾರಂಟೈನ್ ಮುಗಿಸಿ ಮತ್ತೆ ಒಂದಾಗಿದ್ದಾರೆ. ಬರೋಬ್ಬರಿ 60 ವರ್ಷಗಳ ದಾಂಪತ್ಯದಲ್ಲಿ ಇದೇ ಮೊದಲ ಬಾರಿಗೆ ತಿಂಗಳುಗಟ್ಟಲೆ ದೂರವಿದ್ದ ಈ ಜೋಡಿ ಇದೀಗ ಒಂದಾಗಿದ್ದು ಕ್ಯಾಂಡಲ್ ಲೈಟ್ ಡಿನ್ನರ್ ಮಾಡಿ ಸಂಭ್ರಮಿಸಿದ್ದಾರೆ.