
ಹೃದಯಸ್ಪರ್ಶಿ ವಿಡಿಯೋದಲ್ಲಿ ಸ್ಕೂಟಿ ಮೇಲೆ ಪ್ರಯಾಣಿಸುತ್ತಿರುವ ವ್ಯಕ್ತಿ ತನ್ನ ಬಳಿ ಇರುವ ದೊಡ್ಡ ಬ್ಯಾಗಿನಲ್ಲಿ ಮಗಳನ್ನ ಕೂರಿಸಿಕೊಂಡಿದ್ದಾರೆ. ಕೆಲಸ ಮಾಡುವ ವೇಳೆಯಲ್ಲಿ ಮಗುವಿನ ಕಾಳಜಿ ಮಾಡಲು ಸಾಧ್ಯವಾಗದ ಹಿನ್ನೆಲೆ ಬೈಕಿನಲ್ಲೇ ಪುಟ್ಟ ಮಗುವಿಗೆ ತಾತ್ಕಾಲಿಕ ತೊಟ್ಟಿಲಿನ ವ್ಯವಸ್ಥೆ ಮಾಡಿದ್ದಾರೆ.
ಚೀನಾದ 2 ವರ್ಷದ ಮಗು ಇದಾಗಿದ್ದು ಈಕೆ ಆರು ತಿಂಗಳ ಮಗುವಾದಾಗಿನಿಂದ ಹೀಗೆ ತಂದೆಯ ಜೊತೆ ಬೈಕಿನಲ್ಲಿ ಸವಾರಿ ಮಾಡುತ್ತಿದ್ದಾಳೆ. ಈಕೆಯ ನಗುವನ್ನ ನೋಡಿಕೊಂಡು ತಂದೆ ತಮ್ಮ ಕರ್ತವ್ಯವನ್ನ ನಿರ್ವಹಿಸ್ತಾ ಇದ್ದಾರೆ. ಡೆಲಿವರಿ ಬಾಕ್ಸಿನ ಒಳಗಡೆ ಹಾಸಿಗೆಯ ರೀತಿ ವ್ಯವಸ್ಥೆ ಮಾಡಲಾಗಿದ್ದು ಇದರಲ್ಲಿ ಡೈಪರ್ಸ್ ಹಾಗೂ ಫೀಡಿಂಗ್ ಬಾಟಲಿಯನ್ನ ಇಡಲಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿರುವ ಹೆಣ್ಣು ಮಗುವಿನ ತಂದೆ, ಸಾಕಷ್ಟು ವೈಯಕ್ತಿಕ ಕಾರಣಗಳಿಂದಾಗಿ ನಾನು ಮೇ 2019ರಿಂದ ನನ್ನ ಮಗಳನ್ನ ಈ ರೀತಿಯಲ್ಲಿ ಸಾಕುತ್ತಿದ್ದೇನೆ. ಈ ರೀತಿ ಮಗಳನ್ನ ಸಾಕೋದು ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಮಗಳನ್ನ ಸಾಕುವ ವೇಳೆಯಲ್ಲಿ ನಾನು ಸಾಕಷ್ಟು ಸವಾಲುಗಳನ್ನ ಎದುರಿಸಿದ್ದೇನೆ ಎಂದು ಹೇಳಿದ್ರು.
ಫುಡ್ ಡೆಲಿವರಿ ಮಾಡುವ ವೇಳೆಯಲ್ಲಿ ಲಿ ತನ್ನ ಮಗಳಿಗೆ ಗ್ರಾಹಕರಿಂದ ದೂರ ಇರುವಂತೆ ಹೇಳುತ್ತಿದ್ದರಂತೆ. ಗ್ರಾಹಕರು ನೀವು ಯಾಕೆ ಮಗುವನ್ನ ಕರೆದುಕೊಂಡು ಬಂದಿದ್ದೀರಾ..? ಈಕೆಯ ತಾಯಿ ಎಲ್ಲಿದ್ದಾಳೆ..? ನಿಮಗೆ ಪೋಷಕರು ಇಲ್ಲವೇ..? ಎಂಬ ಪ್ರಶ್ನೆಗಳನ್ನ ಕೇಳುತ್ತಾರೆ. ನನಗೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲು ಆಸಕ್ತಿ ಇಲ್ಲದ ಕಾರಣಕ್ಕೆ ಲಿ ಈ ರೀತಿ ಮಾಡುತ್ತಿದ್ದರಂತೆ.
ಆದರೆ ಗ್ರಾಹಕರು ಯಾವಾಗ ಮಗಳಿಗೆ ಹಣ್ಣು ಹಾಗೂ ತಿಂಡಿಯನ್ನ ನೀಡೋಕೆ ಶುರು ಮಾಡಿದ್ರೋ ಲಿಯ ಈ ಅಭಿಪ್ರಾಯ ಬದಲಾಯ್ತು. ಫಿಯರ್ ತಂದೆ – ತಾಯಿ ಇಬ್ಬರು ಕೆಲಸವನ್ನ ಮಾಡುತ್ತಾರೆ. ಹೀಗಾಗಿ ಬೆಳಗ್ಗಿನ ಸಮಯ ಫಿಯರ್ ತನ್ನ ತಂದೆಯ ಜೊತೆ ಕಳೆಯುತ್ತಾಳೆ. ಮಧ್ಯಾಹ್ನವಾದ ಬಳಿಕ ಲೀ ಮಗುವನ್ನ ತಮ್ಮ ಪತ್ನಿಗೆ ನೀಡುತ್ತಾರೆ. ಲೀ ಪತ್ನಿ ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ.
ಈ ರೀತಿ ಕೆಲಸದ ಮಾಡುತ್ತಲೇ ಮಗು ನೋಡಿಕೊಳ್ಳದ ಹೊರತು ಈ ದಂಪತಿ ಬಳಿ ಬೇರೆ ಆಯ್ಕೆಯೇ ಇಲ್ಲ. ಐದು ತಿಂಗಳ ಮಗುವಾಗಿದ್ದ ವೇಳೆ ಫಿಯರ್ಗೆ ನ್ಯುಮೋನಿಯಾ ಇದೆ ಎಂಬ ಆಘಾತಕಾರಿ ಮಾಹಿತಿ ಬಯಲಾಯ್ತು. ಈಗಾಗಲೇ ದಂಪತಿ ಮಗಳ ಚಿಕಿತ್ಸೆಗಾಗಿ ತಮ್ಮ ಉಳಿತಾಯದ ಹಣವನ್ನೆಲ್ಲ ಖಾಲಿ ಮಾಡಿದ್ದಾರೆ.
ಈ ವಿಡಿಯೋ ವೈರಲ್ ಆಗ್ತಿದ್ದಂತೆಯೇ ಅನೇಕರು ಮಗುವಿಗೆ ಸಹಾಯಹಸ್ತ ಚಾಚಲು ಮುಂದಾಗಿದ್ದರು. ಆದರೆ ಈ ದಂಪತಿ ಯಾವುದೇ ದೇಣಿಗೆ ಸ್ವೀಕರಿಸಲು ನಿರಾಕರಿಸಿದ್ದಾರೆ.